Friday, July 17, 2026
spot_imgspot_img
spot_imgspot_img

ಬಿ.ಸಿ ರೋಡ್ ನಲ್ಲಿ ಲಾವಣ್ಯ ಬರ್ಬರ ಹತ್ಯೆ ಪ್ರಕರಣ

- Advertisement -
- Advertisement -

ಇಲಿಪಾಷಣ ತೆಗೆದುಕೊಂಡ ಆರೋಪಿ ಚೇತನ್ ಗೌಡ ಬಂಧನ; ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸನೆ

ಬಂಟ್ವಾಳ : ಬಂಟ್ವಾಳ ತಾಲೂಕಿನ ಬಿ. ಸಿ. ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಂಟ್ವಾಳ ತಾಲೂಕಿನ ಕಕ್ಕೆಪದವು ನಿವಾಸಿ ಬಾಲಕೃಷ್ಣ ಗೌಡ ಅವರ ಮಗಳು ಲಾವಣ್ಯ(21) ಅವರನ್ನು ಜು. 16 ರಂದು ಸಂಜೆ ಸುಮಾರು 5:30 ಕ್ಕೆ ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಪುರುಷೋತ್ತಮ ಗೌಡ ಅವರ ಮಗ ಚೇತನ್ ಗೌಡ(22) ನನ್ನು ಪೊಲೀಸರು ಬಂಧಿಸಿದ್ದಾರೆ.

ಜು. 17 ರಂದು ಬೆಳಗ್ಗೆ ಮಂಗಳೂರು ನಗರದ ವಾಮಾಂಜೂರಿನ ಪಚ್ಚನಾಡಿಯಲ್ಲಿ ಆರೋಪಿ ಚೇತನ್ ನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಬಂಟ್ವಾಳದಲ್ಲಿ ನಡೆದ ಘಟನೆಯ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು ಆತನು ಇಲಿಪಾಷಣ ತೆಗೆದುಕೊಂಡಿರುವುರಿಂದ ಆತನನ್ನು ತಪಾಸನೆಗೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಹೆಚ್ಚಿನ ವಿವರಗಳನ್ನು ನಂತರ ನೀಡಲಾಗುವುದು.

- Advertisement -

Related news

error: Content is protected !!