


ವಿಟ್ಲ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧೀನದಲ್ಲಿ ರಚನೆಯಾಗಿರುವ ಡೇ-ನಲ್ಮ್ ಯೋಜನೆಯ ಒಕ್ಕೂಟದ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಕರುಣಾಕರ ನಾಯ್ತೊಟ್ಟು, ಉಪಾಧ್ಯಕ್ಷರಾದ ಸಂಗೀತ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ರವರು ಭಾಗವಹಿಸಿ ಸಂಘದ ಬಲವರ್ಧನೆ ಬಗ್ಗೆ ಸಲಹೆ ನಿಡಿದರು.
ಮುಖ್ಯಾಧಿಕಾರಿ ಕರುಣಾಕರ ವಿ., ರವರು ಸಭೆಯಲ್ಲಿ ಸ್ವ ಸಹಾಯ ಸಂಘಗಳ ಬ್ಯಾಂಕ್ ಸಾಲ ಮತ್ತು ಆಂತರಿಕ ಸಾಲ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿ ಸಂಘದ ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು. ನಂತರ ಮುಖ್ಯಾಧಿಕಾರಿ ಘನತ್ಯಾಜ್ಯ ನಿರ್ವಹಣೆಯ ನಿಯಮಗಳು 2026 ರ ಬಗ್ಗೆ ಮಾಹಿತಿ ನೀಡುತ್ತಾ ಪ್ರತಿ ಮನೆಯಿಂದ ನಾಲ್ಕು ವಿಧದ ತ್ಯಾಜ್ಯ ವನ್ನು (ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ , ವಿಶೇಷ ಕಾಳಜಿ ತ್ಯಾಜ್ಯ) ವಿಂಗಡಣೆ ಮಾಡಿ ತ್ಯಾಜ್ಯ ಸಂಗ್ರಹ ಮಾಡುವವರಿಗೆ ನೀಡಲು ಹಾಗೂ ಈ ಬಗ್ಗೆ ಸ್ವ ಸಹಾಯ ಸಂಘದ ಮಾಸಿಕ ಸಭೆಯಲ್ಲಿ ಎಲ್ಲಾ ಸದಸ್ಯರಿಗೂ ಮಾಹಿತಿ ನೀಡುವಂತೆ ಒಕ್ಕೂಟದ ಪ್ರತಿನಿಧಿಗಳಿಗೆ ತಿಳಿಸಿದರು. ಹಾಗೂ ಪ್ಲಾಸ್ಟಿಕ್ ಬಳಕೆ ಮಾಡದೆ ಮರು ಬಳಕೆಯಾಗುವ ಚೀಲಗಳನ್ನು ಉಪಯೋಗಿಸಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವಂತೆ ತಿಳಿಸಿದರು.

C.R.P.ಮಮತ ರವರು ಸಭೆಯನ್ನು ನಿರ್ವಹಿಸಿದರು. ಸಭೆಗೆ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿ ಸಂಘದ ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗೆ ಮಾಹಿತಿ ಪಡೆದರು.








