Saturday, August 15, 2026
spot_imgspot_img
spot_imgspot_img

ವಿಟ್ಲ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

- Advertisement -
- Advertisement -

ವಿಟ್ಲ: 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ವಿಟ್ಲ ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಸಂಸ್ಥೆಯ ಪ್ರಾಚಾರ್ಯರಾದ ಹರೀಶ್ ದ್ವಜಾರೋಹಣ ನೆರವೇರಿಸಿದರು. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ಸಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ಕೃಷಿ, ಶಿಕ್ಷಣ ಮತ್ತು ಯುವಶಕ್ತಿಯೇ ಈ ಪಯಣದ ಪ್ರಮುಖ ಬಲಗಳಾಗಿವೆ. ಸಂಪೂರ್ಣ ಸ್ವಾತಂತ್ರ್ಯದ ಅರ್ಥವನ್ನು ಸಾಕಾರಗೊಳಿಸುವ ಜವಾಬ್ದಾರಿ ನಮ್ಮ ಕೈಯಲ್ಲಿದೆ, ಪ್ರತಿಯೊಬ್ಬ ವಿದ್ಯಾರ್ಥಿಯು ದೇಶಕ್ಕಾಗಿ ಸೇವೆ ಸಲ್ಲಿಸಬೇಕೆಂದು ತರಬೇತಿದಾರರಿಗೆ ಸಂದೇಶ ನೀಡಿದರು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಎನ್‌.ಎಸ್.ಎಸ್ ಅಧಿಕಾರಿ ಶರತ್ ಕುಮಾರ್ ಎಸ್.ಎಚ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಜಯಂತ್ ಅಜೇರು ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಭಾರ ತರಬೇತಿ ಅಧಿಕಾರಿಯವರಾದ ರತಿ.ವಿ ಸ್ವಾಗತಿಸಿ, ತೀರ್ಥಾಕ್ಷಿ ಎನ್ ವಂದಿಸಿದರು ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

- Advertisement -

Related news

error: Content is protected !!