- Advertisement -
- Advertisement -



ವಿಟ್ಲ: ನಾಡಿನೆಲ್ಲೆಡೆ ಇಂದು ನಾಗರ ಪಂಚಮಿಯ ವಿಶೇಷ ದಿನವನ್ನು ಆಚರಿಸಲಾಗುತ್ತಿದ್ದು, ವಿಟ್ಲದ ಸುತ್ತಮುತ್ತ ಹಲವೆಡೆ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದ ನಾಗನ ಸನ್ನಿಧಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ಶ್ರೀ ಶ್ರೀ ಶ್ರೀ ಶಂಕರಾಶ್ರಮ ಸ್ವಾಮೀಜಿಯವರು ವಿಶೇಷ ಪೂಜೆ ನೆರವೇರಿಸಿ, ಶ್ರೀ ಅನಂತೇಶ್ವರ ದೇವರಿಗೆ ವಿಶೇಷ ಅಭಿಷೇಕ ನಡೆಯಿತು.


ಹನುಮಗಿರಿ ಶ್ರೀ ರಾಮ ಮಂದಿರದ ನಾಗ ಸನ್ನಿಧಿ, ವಿಟ್ಲದ ಕುಮಾರ ವನ ನಾಗ ಬನದಲ್ಲಿ ಹಾಗೂ ವಿಟ್ಲ ಶ್ರೀ ಅಯ್ಯಪ್ಪ ದೇವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ಕ್ಷೀರಾಭಿಷೇಕ ನಡೆಯಿತು.



- Advertisement -








