Sunday, September 6, 2026
spot_imgspot_img
spot_imgspot_img

ಶಿಕ್ಷಕರಿಗೆ ಹೆಸರಿನ ಮುಂದೆ Tr. ಪದ ಬಳಕೆಗೆ ಸರ್ಕಾರ ಅಧಿಕೃತ ಆದೇಶ

- Advertisement -
- Advertisement -

ಬೆಂಗಳೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಇನ್ನು ಮುಂದೆ ರಾಜ್ಯದ ಎಲ್ಲಾ ಶಿಕ್ಷಕರು ತಮ್ಮ ಹೆಸರಿನ ಮುಂದೆ ‘Tr.’ ಎಂಬ ಸಂಕ್ಷಿಪ್ತ ರೂಪವನ್ನು ಬಳಸಲು ಸರ್ಕಾರ ಅಧಿಕೃತವಾಗಿ ಅನುಮತಿ ನೀಡಿದೆ. ಶಿಕ್ಷಕರ ಸೇವೆಗೆ ಗೌರವ ಸೂಚಿಸುವ ಸಲುವಾಗಿ ಇದನ್ನು ಪರಿಗಣಿಸಲಾಗಿದೆ.

ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಇದರಿಂದ ರಾಜ್ಯದ ಸರ್ಕಾರಿ ಸೇರಿದಂತೆ ಶಿಕ್ಷಕ ವೃಂದಕ್ಕೆ ತಮ್ಮ ಹೆಸರಿನ ಮುಂದೆ ‘Tr.’ ಬಳಸುವ ಅವಕಾಶ ದೊರೆತಿದೆ.

‘Tr.’ ಬಳಕೆಗೆ ಅವಕಾಶ ನೀಡಿರುವುದು ಕೇವಲ ಹೆಸರಿನ ಮುಂದೆ ಒಂದು ಅಕ್ಷರ ಅಥವಾ ಸಂಕ್ಷಿಪ್ತ ರೂಪ ಸೇರಿಸುವ ಕ್ರಮವಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ಸಲ್ಲಿಸುತ್ತಿರುವ ಸೇವೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರ ಹಾಗೂ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗೆ ಸಿಗುತ್ತಿರುವ ಗೌರವದ ಸಂಕೇತವಾಗಿದೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸರ್ಕಾರ ಕೈಗೊಂಡಿರುವ ಈ ಕ್ರಮವು ಶಿಕ್ಷಕರ ವಲಯದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದೆ.

ಶಿಕ್ಷಕರ ಸೇವೆಯನ್ನು ಗುರುತಿಸುವ ಈ ನಿರ್ಧಾರವು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಆತ್ಮಗೌರವವನ್ನು ಹೆಚ್ಚಿಸುವ ಕ್ರಮವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!