- Advertisement -
- Advertisement -

ಬೆಳ್ತಂಗಡಿ; ಉಜಿರೆಯ ಇಂಜಿನಿಯರಿಂಗ್ ಕಾಲೇಜಿನ ಕಾಂಪೌಂಡ್ ಒಳಗೆ ಸೇರಿಕೊಂಡಿರುವ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ನಿಟ್ಟಿನಲ್ಲಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರೂ ಕಾಡಾನೆ ಪೇಟೆಯತ್ತ ನುಗ್ಗಲು ಪ್ರಯತ್ನಿಸಿದ್ದು, ಗುಂಡು ಹಾರಿಸಿ, ಪಟಾಕಿ ಹೊಡೆದು ಆನೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಸಿದ್ದಾರೆ.ಇಂದು ಬೆಳಗ್ಗೆ ಕಾಡಾನೆ ಇಂಜಿನಿಯರಿಂಗ್ ಕಾಲೇಜಿನ ಹಿಂಬದಿ ಸೇರಿಕೊಂಡಿದ್ದು, ಉಜಿರೆ ಪೇಟೆಯ ಬಳಿಯಲ್ಲಿಯೇ ಕಾಡಾನೆ ಬೀಡು ಬಿಟ್ಟಿದೆ. ಇಂಜಿನಿಯರಿಂಗ್ ಕಾಲೇಜಿನ ಕಾಂಪೌಂಡ್ ಒಳಗೆ ಒಂದು ಬದಿಯಲ್ಲಿ ಕಾಡು ಹಿಡಿದ ಪ್ರದೇಶವಿದ್ದು ಇಲ್ಲಿ ಆನೆ ಬೀಡು ಬಿಟ್ಟಿದೆ.
ಕಾಲೇಜು ಹಾಸ್ಟೇಲ್ ಕಟ್ಟಡದಿಂದ ನೂರು ಮೀಟರ್ ದೂರದಲ್ಲಿ ಕಾಡಾನೆಯಿದೆ. ಈ ಪರಿಸರದಲ್ಲಿ ಸುತ್ತ ಮುತ್ತ ಮನೆಗಳಿದ್ದು ಇದರ ಬದಿಯಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದು ಉಜಿರೆ ಪೇಟೆಯ ಸಮೀಪವೇ ಇದೆ. ಆನೆ ಪೇಟೆಯತ್ತ ನುಗ್ಗುವ ಅಪಾಯವಿದೆ.ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿದ್ದಾರೆ.
- Advertisement -








