


ಕುಂಡಡ್ಕ: ವಿಷ್ಣು ಫ್ರೆಂಡ್ಸ್ ಇವರ ವತಿಯಿಂದ ದಿ/ಉಮೇಶ್ ಗೌಡ ಅರ್ಕಲ್ ತೋಟ ಇವರ ಸ್ಮರಣಾರ್ಥ ನೂತನ ಬಸ್ ಸ್ಟ್ಯಾಂಡ್ ದಿ. 26/01/2026 ಸೋಮವಾರದಂದು ಕುಂಡಡ್ಕ ಜಂಕ್ಷನ್ ನಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕಿಶೋರ್ ಕುಮಾರ್ ಪುತ್ತೂರು ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರ್ಕಾರ ಇವರು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದಯಾನಂದ ಶೆಟ್ಟಿ ಉಜಿರೆಮಾರು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರು ಇವರು ವಹಿಸಲಿದ್ದಾರೆ. ಕಾರ್ಯಕ್ರಮದ ಅತಿಥಿಗಳಾಗಿ ಶ್ರೀ ರಾಮದಾಸ್ ಶೆಟ್ಟಿ vtv channel ಮಾಲಕರು ವಿಟ್ಲ, ಶ್ರೀ ಪುನೀತ್ ಮಾಡತ್ತಾರು ಅಧ್ಯಕ್ಷರು, ಗ್ರಾಮ ಪಂಚಾಯತ್ ವಿಟ್ಲ ಮೂಡ್ನೂರು, ಶ್ರೀ ವೇಣುಗೋಪಾಲ್ ಶೆಟ್ಟಿಆಡಳಿತ ಅಧಕ್ಷ್ಯರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುಂಡಡ್ಕ, ಶ್ರೀ ಲಿಂಗಪ್ಪ ಅರ್ಕಲ್ ತೋಟ ಗ್ರಾಮ ಸಹಾಯಕರು ವಿಟ್ಲ , ಶ್ರೀಮತಿ ಚಂದ್ರಾವತಿ ಅರ್ಕಲ್ ತೋಟ ಸದಸ್ಯರು ಗ್ರಾಮ ಪಂಚಾಯತ್ ವಿಟ್ಲ ಮೂಡ್ನೂರು, ಶ್ರೀಮತಿ ರೋಹಿಣಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ವಿಟ್ಲ ಮೂಡ್ನೂರು, ಶ್ರೀ ಗೋವಿಂದ ರಾಜ್ ಪೆರ್ವಾಜೆ ವಕೀಲರು, ಶ್ರೀ ಅಕ್ಷಯ ರಜಪೂತ್ ಹಿಂದು ಮುಖಂಡರು ಬಾಗವಹಿಸಲಿದ್ದಾರೆ.








