Thursday, September 10, 2026
spot_imgspot_img
spot_imgspot_img

ವಿಟ್ಲ: ಅಳಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2025-26ನೇ ಸಾಲಿನ ವಾರ್ಷಿಕ ಮಹಾಸಭೆ

- Advertisement -
- Advertisement -

148.32 ಕೋಟಿ ವ್ಯವಹಾರವನ್ನು ನಡೆಸಿ 62.31 ಲಕ್ಷ ಲಾಭ ಗಳಿಸಿದೆ

ವಿಟ್ಲ: ಅಳಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2025-26 ನೇ ಸಾಲಿನಲ್ಲಿ 148.32 ಕೋಟಿ ವ್ಯವಹಾರವನ್ನು ನಡೆಸಿ 62.31 ಲಕ್ಷ ಲಾಭವನ್ನು ಗಳಿಸಿದ್ದು, ಡಿವಿಡೆಂಟ್ ಶೇ.10ರಷ್ಟು ನೀಡಲಾಗುವುದು. ಕೃಷಿ ಸಲಕರಣೆಗಳ ವ್ಯವಹಾರದಲ್ಲಿ 8.09ಲಕ್ಷ ಲಾಭವನ್ನು ಗಳಿಸಿದೆ. ರೈತರಿಗೆ ಅಗತ್ಯವಾದ ರಸಗೊಬ್ಬರ, ಕ್ರಿಮಿನಾಶಕ ಮಾರಾಟಕ್ಕೆ ಮುಂದಿನ ದಿನದಲ್ಲಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ರೂಪೇಶ್ ರೈ ಅಳಿಕೆಗುತ್ತು ಹೇಳಿದರು.

ಅಳಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ2025-26ನೇ ಸಾಲಿನ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

1866 ಎ ತರಗತಿ ಸದಸ್ಯರನ್ನು ಹೊಂದಿ,2.31ಕೋಟಿ ಪಾಲುಬಂಡವಾಳವನ್ನು ಹೊಂದಿ ಲೆಕ್ಕಪರಿಶೋಧನೆಯಲ್ಲಿ ಎ ವರ್ಗವನ್ನು ಕಾಯ್ದಿರಿಸಿಕೊಂಡಿದೆ. ಸಂಘದ ಠೇವಣಾತಿ 20.85ಶೇ. ವೃದ್ಧಿಯಾಗಿ 30.45ಕೋಟಿ ಸಂಗ್ರಹವಾಗಿದೆ. ಯಶಸ್ವಿನಿ ಯೋಜನೆಯಲ್ಲಿ 875 ಸದಸ್ಯರು ನೋಂದಣಿಗೊಂಡಿದ್ದಾರೆ. ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ 295 ಕೃಷಿಕರು ಜಮೀನಿನ ಬೆಳೆ ವಿಮೆಯನ್ನು ಮಾಡಿಸಿದ್ದಾರೆ ಎಂದರು.

ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಹಾಸ ರೈ ಬಿ. ವರದಿ ವಾಚಿಸಿದರು.

ಉಪಾಧ್ಯಕ್ಷ ಭಾಸ್ಕರ ಮಡಿಯಾಲ, ನಿರ್ದೇಶಕರಾದ ಕಾನ ಈಶ್ವರ ಭಟ್, ವಸಂತ ಎ., ಆನಂದ ಶೆಟ್ಟಿ, ಸೀತಾರಾಮ ಶೆಟ್ಟಿ ಎಂ., ಮಹೇಶ್ ಅಳಿಕೆ, ಸುಂದರ ನಾಯ್ಕ ಬಿ., ಚೆನ್ನಪ್ಪ ಅಳಿಕೆ, ಗೀತಲತಾ ಟಿ. ಶೆಟ್ಟಿ, ಸರಸ್ವತಿ, ಸಹಕಾರ ಸಂಘಗಳ ವಲಯ ಮೇಲ್ವಿಚಾರಕ ಯೋಗೀಶ್ ಎಚ್. ಉಪಸ್ಥಿತರಿದ್ದರು.

- Advertisement -

Related news

error: Content is protected !!