Thursday, September 10, 2026
spot_imgspot_img
spot_imgspot_img

ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ವತಿಯಿಂದ 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ‘ಬಂಗಾರ್ದ ಪರ್ಬ’

- Advertisement -
- Advertisement -

ಕೆಲಿಂಜ: ಶ್ರೀ ಗಣೇಶೋತ್ಸವ ಸಮಿತಿ, ಕೆಲಿಂಜ ಇದರ ಆಶ್ರಯದಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ‘ಬಂಗಾರ್ದ ಪರ್ಬ’ ಸೆ.14 ಸೋಮವಾರದಿಂದ ಸೆ.16 ಬುಧವಾರದ ತನಕ ಮೂರು ದಿನಗಳ ಕಾಲ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಸೆ. 14 ಸೋಮವಾರ ಬೆಳಗ್ಗೆ 6 ಗಂಟೆಗೆ ದೀಪ ಪ್ರಜ್ವಲನೆಯನ್ನು ಶ್ರೀ ಉಳ್ಳಾಲ್ತಿ ದೈವಸ್ಥಾನ ಕೆಲಿಂಜದ ಆಡಳಿತ ಮೊಕ್ತೇಸರರಾದ ಪುಂಡಿಕಾಯಿ ಶಂಕರನಾರಾಯಣ ಭಟ್ ನೆರವೇರಿಸಲಿದ್ದು, ಗಣಪತಿ ದೇವರ ಮೂರ್ತಿ ಪ್ರತಿಷ್ಠೆಯನ್ನು ಮಹೇಶ್ ಭಟ್ ತಂತ್ರಿಗಳು, ಶ್ರೀ ಉಳ್ಳಾಲ್ತಿ ದೈವಸ್ಥಾನ ಕೆಲಿಂಜ ನೆರವೇರಿಸಲಿದ್ದಾರೆ.ಬೆಳಗ್ಗೆ 8 ಗಂಟೆಯಿಂದ ಭಜನಾ ಕಾರ್ಯಕ್ರಮಗಳು ನಡೆಯಲಿದ್ದು, 8.00 ರಿಂದ 8.15ರವರೆಗೆ ಶ್ರೀ ಕೆಲಿಂಜೇಶ್ವರಿ ಮಕ್ಕಳ ಕುಣಿತ ಭಜನಾ ಮಂಡಳಿ ಕೆಲಿಂಜ, 8.15 ರಿಂದ 9.15ರವರೆಗೆ ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಭಜನಾ ಮಂಡಳಿ ಕಾಮಟ, 9.15 ರಿಂದ 10.15ರವರೆಗೆ ವೀರ ವಿಠಲ ಮಹಿಳಾ ಭಜನಾ ಮಂಡಳಿ ವಿಟ್ಲ, ಹಾಗೂ 10.15 ರಿಂದ 11.00ರವರೆಗೆ ಶ್ರೀ ಕೆಲಿಂಜೇಶ್ವರಿ ಮಕ್ಕಳ ಕುಣಿತ ಭಜನಾ ಮಂಡಳಿ ಕೆಲಿಂಜ ತಂಡಗಳಿಂದ ಭಜನೆ ನಡೆಯಲಿದೆ.

ಪೂರ್ವಾಹ್ನ 11.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬೆಂಜಂತಿಮಾರುಗುತ್ತಿನ ಗಿರಿಧರ ರೈ ಯಾನೆ ಮಂಜ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ನೆರಳಕಟ್ಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ್ ಚೌಟ ಮಾಣಿ, ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳದ ಅಧ್ಯಕ್ಷ ಸುರೇಶ್ ಕುಲಾಲ್, ಲಯನ್ಸ್ ಸೇವಾ ಟ್ರಸ್ಟ್ ವಿಟ್ಲದ ಅಧ್ಯಕ್ಷ ಲ| ಪ್ರಭಾಕರ ಶೆಟ್ಟಿ ದಂಬೆಕಾನ, ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ವಿಟ್ಲದ ಅಧ್ಯಕ್ಷ ಶ್ರೀ ಲಯನ್ ಮೋನಪ್ಪ ಗೌಡ, ಉದ್ಯಮಿ ಉದಯ ಕುಮಾರ್ ದಂಬೆ ಪುಣಚ, ಶ್ರೀಮತಿ ಭವಾನಿ ಉಮೇಶ್ ಪೂಜಾರಿ ಚಂದಳಿಕೆ, ರೋಟರಿ ಕ್ಲಬ್ ವಿಟ್ಲದ ಅಧ್ಯಕ್ಷ ರೋ. ಕ್ಯಾಪ್ಟನ್ ದಾಸಪ್ಪ ಪೂಜಾರಿ, ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ್ ಗೌಡ ವಳಗುಡ್ಡೆ ಆಗಮಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಮನ್ವಿತ್ ಆಡೈ, (s/o ನಾರಾಯಣ ಗೌಡ), ಜನನಿ (D/Oಜಯಂತ್ ಗೌಡ) ಗಗನ್ ಎಸ್. ಶೆಟ್ಟಿ(s/o) ಸೀತಾರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 12.45ಕ್ಕೆ ಮಹಾಪೂಜೆ, 1.00ಕ್ಕೆ ಅನ್ನಸಂತರ್ಪಣೆ ನಡೆಯಲಿದ್ದು, ಅಪರಾಹ್ನ 2.00 ರಿಂದ 5.00ರವರೆಗೆ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಸಭಾ ಕಾರ್ಯಕ್ರಮ ಸಂಜೆ 7.00 ಗಂಟೆಗೆ ಪ್ರಾರಂಭವಾಗಲಿದ್ದು, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪುಂಡಿಕಾಯಿ ಶಂಕರನಾರಾಯಣ ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರಿನ ಅಗ್ರಜಾ ಬಿಲ್ಡರ್‍ಸ್ ನ ಸಂದೇಶ್ ಶೆಟ್ಟಿ ಅರೆಬೆಟ್ಟು, ಬಿ. ಸಿ ರೋಡ್ ಖ್ಯಾತ ವಕೀಲರಾದ ಅಶ್ವಿನ್ ಕುಮಾರ್ ರೈ, ಸುರಕ್ಷಾ ಹೆಲ್ತ್ ಸೆಂಟರ್ ನ ಡಾ. ಲಯನ್ ಗೀತಪ್ರಕಾಶ್, ಶ್ರೀಧರ್ ಶೆಟ್ಟಿ ಗುಬ್ಯ ಕೆಳಗಿನಗುತ್ತು , ಕಲ್ಲಡ್ಕ ಅಭಯ್ ಆಯುರ್ ಸೆಂಟರ್ ನ ಡಾ. ರವಿಕಿರಣ್, ಕಲ್ಲಡ್ಕ ಸ್ಟಾರ್ ಇನ್‌ಫ್ರಾಟೆಕ್ ನ ಜಯಪ್ರಶಾಂತ್, ಕಲ್ಲಡ್ಕ ಹೋಟೆಲ್ ಲಕ್ಷ್ಮೀಗಣೇಶ್ ನ ರಾಜೇಂದ್ರ ಹೊಳ್ಳ ಹಾಗೂ ಉದ್ಯಮಿ ಜಗದೀಶ್ ಬಜಾರ್ ಅವರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಜಗದೀಶ್ ರೈ ನಡುವಳಚ್ಚಿಲ್ ಹಾಗೂ ಕು. ಖುಷಿ ಸಾಲ್ಯಾನ್ ಅವರನ್ನು ಸನ್ಮಾನಿಸಲಾಗುವುದು.

ರಾತ್ರಿ 8.45ಕ್ಕೆ ರಂಗ ಪೂಜೆ, 9.00 ಗಂಟೆಗೆ ರಾತ್ರಿ ಪೂಜೆ ಹಾಗೂ 9.30ಕ್ಕೆ ಸಾರ್ವಜನಿಕ ಅನ್ನಪ್ರಸಾದ ನಡೆಯಲಿದೆ. ರಾತ್ರಿ 10.00 ಗಂಟೆಯಿಂದ ಮಂಗಳೂರಿನ ಪ್ರಸಿದ್ಧ ಶ್ರೀಲಲಿತೆ ಕಲಾವಿದರು (ರಿ.) ಮಂಗಳೂರು ತಂಡದಿಂದ “ಶನಿ ಮಹಾತ್ಮೆ” ಎಂಬ ತುಳು/ಕನ್ನಡ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಸೆಪ್ಟೆಂಬರ್ 15ನೇ ಮಂಗಳವಾರ ಬೆಳಿಗ್ಗೆ 4.45ರಿಂದ 7 ಗಂಟೆಯವರೆಗೆ ಪತಂಜಲಿ ಯೋಗ ಶಿಕ್ಷಣ ಸಮಿತಿಯವರಿಂದ ಗಣಪತಿ ನಮಸ್ಕಾರ ನಡೆಯಲಿದ್ದು, 7.30ಕ್ಕೆ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿದೆ.ಬೆಳಿಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಭಜನಾ ಕಾರ್ಯಕ್ರಮ ಜರುಗಲಿದ್ದು, ಕೆಲಿಂಜೇಶ್ವರಿ ಮಹಿಳಾ ಭಜನಾ ಮಂಡಳಿ ಕೆಲಿಂಜ, ವೀರಕಂಭದ ಶಾರದಾಂಬಾ ಭಜನಾ ಮಂಡಳಿ ಮತ್ತು ವರಮಹಾಲಕ್ಷ್ಮೀ ಪೂಜಾ ಸಮಿತಿಯವರು ಭಜನಾ ಸೇವೆ ಸಲ್ಲಿಸಲಿದ್ದಾರೆ.ಪೂರ್ವಾಹ್ನ 11.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರ್ಮಿಕ ದತ್ತಿ ಇಲಾಖೆಯ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಪಕ್ಕಳ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷ ಜಗನ್ನಾಥ ಸಾಲ್ಯಾನ್, ಕೆಎಂಎಫ್ ನಿರ್ದೇಶಕ ಸುಧಾಕರ್ ರೈ ಬೋಳಂತೂರು, ಬಂಟರ ಯಾನೆ ನಾಡವರ ಮಾತೃ ಸಂಘದ ಬಂಟ್ವಾಳ ತಾಲೂಕು ಸಂಚಾಲಕ ಪದ್ಮನಾಭ ರೈ ಕಲ್ಲಡ್ಕ, ಖ್ಯಾತ ವಕೀಲ ಪುಂಡಿಕಾಯಿ ನಾರಾಯಣ ಭಟ್, ಉದ್ಯಮಿಗಳು ಮಾಧವ ಮಾವೆ, ಹಿಂದೂ ಮುಖಂಡ ಮಿಥುನ್ ಪೂಜಾರಿ ಕಲ್ಲಡ್ಕ, ಯಕ್ಷ ಭಾರತ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಂಜೀವ ಪೂಜಾರಿ, ಜಯಂಬಿಕ ಚಿಟ್ ಫಂಡ್ ನ ವಸಂತ ಶೆಟ್ಟಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಸುಖರಾಜ್, ಉದ್ಯಮಿಗಳಾದ ರಾಜೇಶ್ ತೊಡ್ಲ, ಉದ್ಯಮಿ ಯತಿನ್ ಕಲ್ಲಡ್ಕ, ಯುವವಾಹಿನಿ ಅಧ್ಯಕ್ಷ ಕೆ.ಟಿ. ಆನಂದ ಪೂಜಾರಿ ಮತ್ತು ಯುವಕ ಮಂಡಲದ ಅಧ್ಯಕ್ಷ ಸುಧೀರ್ ನಾಯ್ಕ್ ಅವರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಶ್ರೀಮತಿ ರೇವತಿ ಡಿ. ಅವರಿಗೆ ‘ಗ್ರಾಮ ಗೌರವ’ ನೀಡಿ ಸನ್ಮಾನಿಸಲಾಗುವುದು. ಮಧ್ಯಾಹ್ನ 12.45ಕ್ಕೆ ಮಹಾಪೂಜೆ, 1.00 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದ್ದು, ಅಪರಾಹ್ನ 2ರಿಂದ 4 ರವರೆಗೆ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಸಂಜೆ 7.00 ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿದ್ದು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರಾದ ಶ್ರೀ ಜಗನ್ನಾಥ ಚೌಟ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ SLV ಬುಕ್ ಇಂಡಿಯಾ ಪ್ರೈ.ಲಿ. ಮಾಲಕರಾದ ದಿವಾಕರ ದಾಸ್ ನೇರ್ಲಾಜೆ, ಯಮುನ ಬೋರ್‍ ವೆಲ್ಸ್ ಪುರುಷೋತ್ತಮ ಶೆಟ್ಟಿ , ತುಂಬೆ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಹುಬ್ಬಳ್ಳಿಯ ಅನನ್ಯ ಫೀಡ್ಸ್ ನ ಮಾಲಕರು ಗೋವಿಂದ ಭಟ್ ದಿವಾಣ, ಬಂಟ್ವಾಳ PRED ಇಲಾಖೆಯ ಎ.ಇ.ಇ ತಾರಾನಾಥ ಸಾಲ್ಯಾನ್, ಉದ್ಯಮಿಗಳಾದ ಪುಷ್ಪರಾಜ್ ಶೆಟ್ಟಿಗಾರ್, ಬಂಟರ ಸಂಘ ಕಲ್ಲಡ್ಕ ವಲಯ ಅಧ್ಯಕ್ಷ ಗಣೇಶ್ ಶೆಟ್ಟಿ ಗೋಳ್ತಮಜಲು, ಶೀತಲ್ ಫಾರ್ಮ್ಸ್ ನ ರಾಜೇಶ್ ಶೆಟ್ಟಿ ರಾಯಿ, ಲಯನ್ಸ್ ಕ್ಲಬ್ ವಿಟ್ಲ ಅಧ್ಯಕ್ಷೆ ಡಾ. ಗಾಯತ್ರಿ ಗೀತಪ್ರಕಾಶ್, ಜೇಸಿಐ ವಿಟ್ಲ ಅಧ್ಯಕ್ಷ ಜೇಸಿ ಸಂದೀಪ್ ಪೂಜಾರಿ, VTV ಮಾಲಕ ರಾಮದಾಸ್ ಶೆಟ್ಟಿ ವಿಟ್ಲ ಮತ್ತು ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಅವರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಜ್ಯೋತಿ ಕೆ.ಎನ್. ಮತ್ತು ಆಶಾ ಕಾರ್ಯಕರ್ತೆ ಶ್ರೀಮತಿ ಸ್ನೇಹಲತಾ ಶೆಟ್ಟಿ ಅವರಿಗೆ ಸನ್ಮಾನ ನಡೆಯಲಿದೆ.ರಾತ್ರಿ 8.45ಕ್ಕೆ ರಂಗ ಪೂಜೆ, 9.00ಕ್ಕೆ ರಾತ್ರಿ ಪೂಜೆ ಹಾಗೂ 9.30ಕ್ಕೆ ಅನ್ನಪ್ರಸಾದ ನಡೆಯಲಿದ್ದು, ರಾತ್ರಿ 10.00 ಗಂಟೆಯಿಂದ ಮಂಗಳೂರಿನ ಪ್ರಸಿದ್ಧ ನ್ಯೂ ಶೈನ್ ಮ್ಯೂಸಿಕಲ್ ತಂಡದಿಂದ “ಆರ್ಕೆಸ್ಟ್ರಾ – ಕೆಲಿಂಜೋತ್ಸವ” ಎಂಬ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಸೆಪ್ಟೆಂಬರ್ 16ನೇ ಬುಧವಾರ ಬೆಳಿಗ್ಗೆ 7ಗಂಟೆಗೆ ಬೆಳಗ್ಗಿನ ಪೂಜೆ, ಬೆಳಿಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಭಜನಾ ಕಾರ್ಯಕ್ರಮ ನಡೆಯಲಿದ್ದು, ಕೆಲಿಂಜೇಶ್ವರಿ ಭಜನಾ ಮಂಡಳಿ ಕೆಲಿಂಜ, ಉಮಾಮಹೇಶ್ವರ ಭಜನಾ ಮಂಡಳಿ ಮಾಮೇಶ್ವರ ಮತ್ತು ವೀರಾಂಜನೇಯ ಭಜನಾ ಮಂಡಳಿ ಕೋಡಪದವು ತಂಡಗಳು ಭಜನಾ ಸೇವೆ ಸಲ್ಲಿಸಲಿದ್ದಾರೆ.ಪೂರ್ವಾಹ್ನ 11.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಲ್ಲಡ್ಕ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪದ್ಮನಾಭ ಕೊಟ್ಟಾರಿ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಾಯತ್ರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷ ವಿಷ್ಣು ಭಟ್ ಅಡ್ಯೆಯಿ, ವೀರಕಂಭ ಪಿಡಿಒ ಶಂಭು ಕುಮಾರ್ ಶರ್ಮ, ದೇವದಾಸ್ ರೈ ಮಾಡದಾರು, ಉದ್ಯಮಿ ರವಿಶಂಕರ ಸಿಮ್ಲಾಜೆ, ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘ ನಿಡ್ಯದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ಬಿಲ್ಲವ ಸಂಘ ವೀರಕಂಭದ ಗೌರವಾಧ್ಯಕ್ಷ ಜಯಪ್ರಕಾಶ್ ಪೂಜಾರಿ ತೆಕ್ಕಿಪಾಪು, ಮಂಗಳಪದವಿನ ಶ್ರೀದೇವಿ ಇಂಜಿನಿಯರಿಂಗ್ ವರ್ಕ್ಸ್ ನ ಕೇಶವ ಪಂಜುರ್ಲಿಕೋಡಿ ಮತ್ತು ಉದ್ಯಮಿ ರಮೇಶ್ ವರಪಾದೆ ವಿಟ್ಲ ಅವರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ನಡೆಯಲಿದ್ದು, ಮಧ್ಯಾಹ್ನ 12.45ಕ್ಕೆ ಮಹಾಪೂಜೆ ಮತ್ತು 1 ಗಂಟೆಗೆ ಅನ್ನಸಂತರ್ಪಣೆ ಜರುಗಲಿದೆ.ಸಂಜೆ 3.00 ಗಂಟೆಯಿಂದ ಶೋಭಾಯಾತ್ರೆ, ಸಂಜೆ 3.00 ಗಂಟೆಗೆ ಶ್ರೀ ಕ್ಷೇತ್ರ ಕೆಲಿಂಜದಿಂದ ಹೊರಟು ಮಂಗಲಪದವು, ಒಕ್ಕೆತ್ತೂರು ನದಿಯ ತನಕ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಕೆಲಿಂಜೇಶ್ವರಿ ಮಕ್ಕಳ ಕುಣಿತ ಭಜನಾ ಮಂಡಳಿ ಕೆಲಿಂಜ, ಶ್ರೀ ವಿದ್ಯಾ ದೇವಿ ಭಜನಾ ಮಂಡಳಿ ದೇವಿನಗರ ಪುಣಚ ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ನೀರ್ಕಜೆ ಕೇಪು ತಂಡಗಳು ಭಾಗವಹಿಸಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!