- Advertisement -
- Advertisement -





ನೇರಳಕಟ್ಟೆ: ಶ್ರೀ ಗಣೇಶ ಸಭಾಭವನ ಶಾಖೆ ನೇರಳಕಟ್ಟೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದ ಜೊತೆಗೆ ಯೋಗ ಸಮವಸ್ತ್ರ ವಿತರಣಾ ಕಾರ್ಯಕ್ರಮ ಭಾನುವಾರ (ಸೆ.13) ನಡೆಯಿತು.
ಮುಖ್ಯ ಮಾತುಗಾರರಾಗಿ ಪ್ರಕಾಶ್ ಅಣ್ಣಡ್ಕ ಅವರು ಸಮಿತಿ ಮತ್ತು ಯೋಗದ ಮಹತ್ವದ ಕುರಿತು ವಿವರಿಸಿದರು. ಶ್ರೀಮತಿ ವೃಂದಾ ಜೆ. ರೈ ಅವರು ಸಂಕಲ್ಪ ಬೋಧನೆ ಮಾಡಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಗಣೇಶ್ ಅವರು ನಡೆಸಿಕೊಟ್ಟರು. ಮೋಹನ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಯೋಗಬಂಧುಗಳು ಉಪಸ್ಥಿತರಿದ್ದರು.
- Advertisement -








