Wednesday, August 19, 2026
spot_imgspot_img
spot_imgspot_img

ಸ್ಯಾಮ್‌ಸಂಗ್ ಕಂಪೆನಿಗೆ ಬಿಸಿ ಮುಟ್ಟಿಸಿದ ಮಂಗಳೂರು ಗ್ರಾಹಕ: ಹೊಸ ಟಿವಿ ನೀಡಿದ ಕಂಪೆನಿ

- Advertisement -
- Advertisement -

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಪತ್ರಿಕೆಯೊಂದರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಹಕರೊಬ್ಬರು ಕಳೆದ ವರ್ಷ ಹೊಚ್ಚ ಹೊಸ ಸ್ಯಾಮ್‌ಸಂಗ್ ಟಿವಿಯೊಂದನ್ನು ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ಇರುವ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲಿ ಖರೀದಿಸಿದರು. 39 ಸಾವಿರ ಬೆಲೆಯುಳ್ಳ ಈ ಸ್ಯಾಮ್‌ಸಂಗ್ ಟಿವಿ 10 ತಿಂಗಳಲ್ಲಿ ಕೆಟ್ಟು ಹೋಯಿತು.

ಈ ಬಗ್ಗೆ ಅವರು ರಿಲಯನ್ಸ್ ಡಿಜಿಟಲ್‌ಗೆ ದೂರು ಸಲ್ಲಿಸಿದರು. ಇದನ್ನು ಸಂಬಂಧಪಟ್ಟ ಸೇವಾ ಕೇಂದ್ರಕ್ಕೆ ರಿಲಯನ್ಸ್ ಮಳಿಗೆಯವರು ಕಳುಹಿಸಿದ್ದರು. ಆದರೆ ನಾಲ್ಕು ದಿನದಲ್ಲಿ ಟಿವಿಯನ್ನು ರಿಪೇರಿ ಮಾಡಿಕೊಡುವುದಾಗಿ ಹೇಳಿದ್ದ ಸೇವಾ ಕೇಂದ್ರ ವಾರವಾದರೂ ಸ್ಪಂದನೆ ಮಾಡಿರಲಿಲ್ಲ.

ಸಾಕಷ್ಟು ಇಮೇಲ್, ದೂರವಾಣಿ ಕರೆ ಬಳಿಕ ಅವರು ಸ್ಯಾಮ್‌ಸಂಗ್ ರಿಲಯನ್ಸ್ ಡಿಜಿಟಲ್‌ಗೆ ಲೀಗಲ್ ನೋಟೀಸ್ ಜಾರಿಗೊಳಿಸಿದರು. ಜೊತೆಗೆ ಗ್ರಾಹಕ ಕೇಂದ್ರಕ್ಕೆ ದೂರು ಸಲ್ಲಿಸಿದರು. ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಸ್ಯಾಮ್ ಸಂಗ್ ಕಂಪೆನಿ ಹೊಸ ಟಿವಿಯೊಂದನ್ನು ನೀಡಿ ಪ್ರಕರಣಕ್ಕೆ ಸುಖಾಂತ್ಯ ಹಾಡಿತು.

- Advertisement -

Related news

error: Content is protected !!