Monday, September 21, 2026
spot_imgspot_img
spot_imgspot_img

ಕಾರ್ತಿಕ್ ಮೇರ್ಲ ಹತ್ಯೆ: ಕಿರಣ್, ಪ್ರೀತೇಶ್ ಮೇಲಿನ ಆರೋಪ ಸಾಬೀತು-ನಾಳೆ ಶಿಕ್ಷೆ ಪ್ರಮಾಣ ಪ್ರಕಟ

- Advertisement -
- Advertisement -

ಪುತ್ತೂರು: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಅವರ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಕಿರಣ್ ಹಾಗೂ ಪ್ರೀತೇಶ್ ಮೇಲಿನ ಆರೋಪಗಳು ಸಾಬೀತಾಗಿವೆ.

ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಬ್ಬರು ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿದ್ದು, ಸೆ.22ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. 2019ರ ಸೆ.3ರಂದು ಸಂಪ್ಯದಲ್ಲಿ ಗಣೇಶೋತ್ಸವದ ಅಂಗವಾಗಿ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ಕಾರ್ತಿಕ್ ಮೇರ್ಲ ಅವರ ಮೇಲೆ ದಾಳಿ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರ್ಯಾಪು ಮೂಲದ ಸಹೋದರರಾದ ಚರಣ್‌ರಾಜ್ ಹಾಗೂ ಕಿರಣ್ ಮತ್ತು ಉಳ್ಳಾಲ ಮೂಲದ ಪ್ರೀತೇಶ್ ಅವರನ್ನು ಆರೋಪಿಗಳನ್ನಾಗಿ ಮಾಡಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ಕಿರಣ್ ಮತ್ತು ಪ್ರೀತೇಶ್ ಮೇಲಿನ ಆರೋಪಗಳು ಸಾಬೀತಾಗಿವೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜಯಂತಿ ಸತೀಶ್ ಭಟ್ ವಾದ ಮಂಡಿಸಿದ್ದರು.

ಈ ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿಯಾಗಿದ್ದ ಚರಣ್‌ರಾಜ್ 2022ರ ಜೂನ್‌ನಲ್ಲಿ ಪೆರ್ಲಂಪಾಡಿಯಲ್ಲಿ ಮತ್ತೊಂದು ತಂಡದ ದಾಳಿಗೆ ಬಲಿಯಾಗಿದ್ದ. ಕಾರ್ತಿಕ್ ಮೇರ್ಲ ಕೊಲೆಗೆ ಪ್ರತೀಕಾರವಾಗಿ ಚರಣ್‌ರಾಜ್‌ನನ್ನು ಹತ್ಯೆ ಮಾಡಲಾಗಿದೆ ಎಂಬುದು ಅಂದಿನ ವರದಿಗಳಲ್ಲಿ ಉಲ್ಲೇಖವಾಗಿತ್ತು. **ಸೆ.22ರಂದು ನ್ಯಾಯಾಲಯ ಪ್ರಕಟಿಸಲಿರುವ ಶಿಕ್ಷೆಯ ಪ್ರಮಾಣದ ಬಗ್ಗೆ ಇದೀಗ ಕುತೂಹಲ ಮೂಡಿದೆ.**

- Advertisement -

Related news

error: Content is protected !!