Sunday, September 27, 2026
spot_imgspot_img
spot_imgspot_img

ಆಫ್ರಿಕಾದ ಬಾರ್‌ನಲ್ಲಿ ಭೀಕರ ಗುಂಡಿನ ದಾಳಿ – 17 ಮಂದಿ ಸಾವು, 15 ಮಂದಿಗೆ ಗಾಯ

- Advertisement -
- Advertisement -

ಗೌಟೆಂಗ್: ಜೋಹಾನ್ಸ್‌ಬರ್ಗ್‌ನ ನೈಋತ್ಯದಲ್ಲಿರುವ ವೆಡೆಲಾದ ವೆಸ್ಟ್ ರಾಂಡ್ ಪ್ರದೇಶದಲ್ಲಿನ ಬಾರ್‌ವೊಂದರಲ್ಲಿ ತಡರಾತ್ರಿ ಏಕಾಏಕಿ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ 17 ಜನರು ಹತ್ಯೆಗೀಡಾಗಿದ್ದು, 15 ಜನ ಗಾಯಗೊಂಡಿದ್ದಾರೆ.

ಘಟನೆಯಲ್ಲಿ 13 ಜನ ಪುರುಷರು ಮತ್ತು ನಾಲ್ವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾಳಿಯ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲ ಎಂದು ದಕ್ಷಿಣ ಆಫ್ರಿಕಾದ ಪೊಲೀಸ್ ಇಲಾಖೆ ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ತಿಳಿಸಿದೆ.

ಗೌಟೆಂಗ್ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ 9:30 ರ ಸುಮಾರಿಗೆ ಈ ಘಟನೆ ನಡೆದಿದ್ದು, ದಾಳಿ ನಡೆಸಲು ಬಂದಿದ್ದ ಶಂಕಿತರು ಎಕೆ-47 ರೈಫಲ್‌ಗಳು ಮತ್ತು ಪಿಸ್ತೂಲ್‌ಗಳನ್ನು ಹೊಂದಿದ್ದರು ಎನ್ನಲಾಗಿದೆ.

ಶಂಕಿತರು ಬಾರ್‌ ಹೊರಗಡೆ ಮದ್ಯಪಾನ ಮಾಡುತ್ತಿದ್ದ ಗ್ರಾಹಕರ ಮೇಲೆ ಗುಂಡು ಹಾರಿಸಿ, ನಂತರ ಒಳಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಇತರ 15 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ 8 ಮಂದಿಯನ್ನು ಪತ್ತೆಹಚ್ಚಿ ಬಂಧಿಸಲು ದಕ್ಷಿಣ ಆಫ್ರಿಕಾ ಪೊಲೀಸ್ ಇಲಾಖೆ ಮುಂದಾಗಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!