Monday, September 28, 2026
spot_imgspot_img
spot_imgspot_img

ಮಾಣಿ ಫ್ಲೈಓವರ್ ಬಳಿ ಭೀಕರ ಅಪಘಾತ; ಮಹಿಳೆ ಮೃತ್ಯು, ಮೂವರು ಗಂಭೀರ-ಉಮ್ರಾ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದ ಕುಟುಂಬ

- Advertisement -
- Advertisement -

ಮಾಣಿ: ಇಲ್ಲಿನ ಹಳೀರ ಬಳಿ ಫ್ಲೈಓವರ್ ಆರಂಭವಾಗುವ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಆಲ್ಟೋ ಕಾರು ಹಾಗೂ ಟೆಂಪೋ ಪಿಕಪ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಡಿಕೇರಿ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉಮ್ರಾ ತರಗತಿ ಮುಗಿಸಿ ಕುಟುಂಬದ ಸದಸ್ಯರು ಮನೆಗೆ ಹಿಂದಿರುಗುತ್ತಿದ್ದ ವೇಳೆ ಬೆಳಗ್ಗೆ ಸುಮಾರು 6 ಗಂಟೆಗೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನಾ ಸ್ಥಳದಲ್ಲಿರುವ ಹಳೀರದ ಸರ್ವಿಸ್ ರಸ್ತೆ ಪುತ್ತೂರು–ಮಡಿಕೇರಿ–ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಸಂದರ್ಭ ವಾಹನ ಚಾಲಕರಿಗೆ ಗೊಂದಲ ಉಂಟಾಗುತ್ತಿದೆ ಎಂದು ಸ್ಥಳೀಯರು ಹಲವು ಬಾರಿ ಆರೋಪಿಸಿದ್ದಾರೆ.

ಹೊರಗಿನಿಂದ ಬರುವ ವಾಹನ ಸವಾರರಿಗೆ ಪ್ರವೇಶ ರಸ್ತೆಯ ಬಗ್ಗೆ ಸ್ಪಷ್ಟ ಮಾಹಿತಿ ಸಿಗದಿರುವುದು, ಕಿರಿದಾದ ರಸ್ತೆ ಸರಿಯಾಗಿ ಗೋಚರಿಸದಿರುವುದು ಹಾಗೂ ಸೂಕ್ತ ಸೂಚನಾ ಫಲಕಗಳ ಕೊರತೆಯಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

- Advertisement -

Related news

error: Content is protected !!