Monday, October 5, 2026
spot_imgspot_img
spot_imgspot_img

ಬೆಂಗಳೂರು: ಭೀಕರ ಅಗ್ನಿ ಅವಘಡ; ಕೆಮಿಕಲ್ ಬ್ಲಾಸ್ಟ್ ಆಗಿ ಹೊತ್ತಿ ಉರಿದ ಕಂಟೇನರ್

- Advertisement -
- Advertisement -

ಬೆಂಗಳೂರು: ಹೊಸಕೋಟೆ ನಗರದ ಸಂತೆ ಸರ್ಕಲ್‌ನಲ್ಲಿ ಸಂಜೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಲಾರಿ ಕಂಟೇನರ್ ತಯಾರಿಸುವ ಗ್ಯಾರೇಜ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಕಂಟೇನರ್‌ ಧಗಧಗನೇ ಹೊತ್ತಿ ಉರಿದಿದೆ.

ನಗರದ ಸಂತೆ ಸರ್ಕಲ್ ಬಳಿಯ ʼಕಾರ್ತಿಕ್ ಇಂಜಿನಿಯರಿಂಗ್ ವರ್ಕ್ಸ್‌ʼ ಗ್ಯಾರೇಜ್‌ನಲ್ಲಿ ಈ ಘಟನೆ ಸಂಭವಿಸಿದೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಅಗ್ನಿ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಲಾರಿ ಪೇಂಟಿಂಗ್ ಮಾಡಲು ಗ್ಯಾರೇಜ್ ಒಳಗೆ ಇಟ್ಟಿದ್ದ ಕೆಮಿಕಲ್ ಡಬ್ಬಿಗಳಿಗೆ ಬೆಂಕಿ ತಗುಲಿದ್ದರಿಂದ, ಬೆಂಕಿಯ ಜ್ವಾಲೆ ಇಡೀ ಗ್ಯಾರೇಜ್‌ ವ್ಯಾಪಿಸಿದೆ.

ಕಂಟೇನರ್ ತಯಾರಿಕೆಗೆ ತಂದಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಈ ಘಟನೆಯಿಂದ ಸುಮಾರು 50 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಬೆಂಕಿ ಹೊತ್ತಿಕೊಂಡ ತಕ್ಷಣ ಸುತ್ತಮುತ್ತ ದಟ್ಟ ಹೊಗೆ ಆವರಿಸಿಕೊಂಡಿತ್ತು. ತಕ್ಷಣವೇ ವಿಷಯ ತಿಳಿದು ಸ್ಥಳಕ್ಕೆ ಬಂದ ಎರಡು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!