Saturday, November 21, 2026
spot_imgspot_img
spot_imgspot_img

ಪತ್ನಿ ಮತ್ತು ಅತ್ತೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಪಿ ಪತಿ!

- Advertisement -
- Advertisement -

ಬೆಂಗಳೂರು: ಪಾಪಿ ಪತಿಯೋರ್ವ ಪತ್ನಿ ಹಾಗೂ ಅತ್ತೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೈಚಾಪುರದಲ್ಲಿ ಈ ಘಟನೆ ನಡೆದಿದೆ.

ಲಕ್ಷ್ಮಿ ದೇವಿ (50) ರಮಾದೇವಿ (30) ಎಂಬವರೇ ಕೊಲೆಯಾದ ಅಮ್ಮ, ಮಗಳು. ಮಲಯ ಫರೀದ (40) ಎಂಬಾತನೇ ಹತ್ಯೆ ಗೈದ ಪಾಪಿ ಪತಿ. ಓರಿಸ್ಸಾ ಮೂಲದ ಈ ಕುಟುಂಬ ಮನೆಯನ್ನು ಬಾಡಿಗೆ ಪಡೆದು ಜೀವನ ಸಾಗಿಸುತ್ತಿತ್ತು. ಆರೋಪಿ ಮಲಯ ಫರಿದ ಮದುವೆ ಆಗದೆ ಸಂಸಾರ ಮಾಡುತ್ತಿದ್ದ. ದಂಪತಿಗಳಿಗೆ 5 ತಿಂಗಳ ಮಗುವಿತ್ತು.

ತನ್ನ ಮಗಳನ್ನು ಮದುವೆಯಾಗುವಂತೆ ಅತ್ತೆ ಲಕ್ಷ್ಮೀ ದೇವಿ ಆಗಾಗ ಒತ್ತಾಯ ಮಾಡುತ್ತಿದ್ದರು. ಆದರೆ ಮದುವೆಯಾಗೋದು ಮಲಯ ಫರೀದನಿಗೆ ಇಷ್ಟವಿರಲಿಲ್ಲ. ಹೀಗಾಗಿ ಕೋಪಗೊಂಡ ಫರೀದ ಮಧ್ಯರಾತ್ರಿ ಅತ್ತೆ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಮಲಗಿದ್ದ ಪತ್ನಿಯನ್ನು ಎಬ್ಬಿಸಿ ವಿಚಾರವನ್ನು ತಿಳಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಪತ್ನಿ ರಮಾದೇವಿ ಕಿರುಚಿದ್ದಾಳೆ. ಈ ವೇಳೆಯಲ್ಲಿ ಆರೋಪಿ ಫರೀದಾ ಪತ್ನಿಯ ಕತ್ತುಸೀಳಿ ಕೊಲೆಗೈದು ಪೊಲೀಸರ ಮುಂದೆ ಶರಣಾಗಿದ್ದಾನೆ.

ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೊತ್ತರ ಪರೀಕ್ಷೆಗೆ ಮೃತ ದೇಹ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

- Advertisement -

Related news

error: Content is protected !!