Thursday, July 30, 2026
spot_imgspot_img
spot_imgspot_img

ಬೆಂಗಳೂರು: ಪ್ರೀತಿಗೆ ವಿರೋಧ – ತಾಯಿಯ ಬಳಿಕ ಮಗಳು ಆತ್ಮಹತ್ಯೆ!

- Advertisement -
- Advertisement -

ಬೆಂಗಳೂರು: ಮಗಳ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ ತಾಯಿ ಎರಡು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಮಗಳು ಇದೇ ಪ್ರೀತಿ ವಿಷಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ನಲ್ಲಿ ಈ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಜೆಮಿನಿ ಎಂದು ಗುರುತಿಸಲಾಗಿದೆ. ಜೆಮಿನಿ, ಭರತ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಪ್ರೀತಿಗೆ ಹೆತ್ತವರು ವಿರೋಧ ವ್ಯಕ್ತಪಡಿಸಿದ್ದರು.ಭರತ್ ನಡತೆ ಸರಿ ಇರಲಿಲ್ಲ. ಆತ ಗಾಂಜಾ ವ್ಯಸನಿಯಾಗಿದ್ದಾನೆ ಎಂದು ತಿಳಿದು ಜೆಮಿನಿಯ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದರು. ಮಗಳು ಮಾತು ಕೇಳದ್ದಕ್ಕೆ ತಾಯಿ ಶಶಿಕಲಾ ಎರಡು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅಮ್ಮ ಆತ್ಮಹತ್ಯೆ ಮಾಡಿದ ಬಳಿಕವೂ ಜೆಮಿನಿ, ಭರತ್ ಜತೆ ಸ್ನೇಹ ಮುಂದುವರಿಸಿದ್ದಳು. ಜನವರಿ 1 ರಂದು ತಂದೆ ನಾಗರಾಜ್ ಗೆ ಫೋನ್ ಮಾಡಿ, ಜೆಮಿನಿಗೆ ಫೋನ್ ನೀಡುವಂತೆ ಭರತ್ ಒತ್ತಾಯಿಸಿದ್ದ ಎಂದು ಹೇಳಲಾಗಿದೆ. ಜನವರಿ 5ರಂದು ಜೆಮಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೀಗ ತಂದೆ ನಾಗರಾಜ್ ನೀಡಿದ ದೂರಿನ ಅನ್ವಯ ಆರೋಪಿ ಭರತ್ ನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!