Wednesday, October 21, 2026
spot_imgspot_img
spot_imgspot_img

ಶ್ರೀ ದೇವತಾ ಸಮಿತಿ ವಿಟ್ಲ ಆಶ್ರಯದಲ್ಲಿ 55ನೇ ವರ್ಷದ ವಿಟ್ಲ ಶಾರದೋತ್ಸವ ಸಂಪನ್ನ – ವೈಭವದ ಶೋಭಾಯಾತ್ರೆ

- Advertisement -
- Advertisement -

ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ದ.ಕ. ಆಶ್ರಯದಲ್ಲಿ 55ನೇ ವರ್ಷದ ವಿಟ್ಲ ಶಾರದೋತ್ಸವವು ಅ.16 ರಿಂದ ಅ.20 ರವರೆಗೆ ವಿಟ್ಲದ ಶ್ರೀಮತ್ ಅನಂತೇಶ್ವರ ದೇವಸ್ಥಾನದ “ಪರಿಜ್ಞಾನ ಅತಿಥಿಗೃಹ”ದಲ್ಲಿ ವಿಜೃಂಭಣೆಯಿಂದ ನಡೆಯಿತು.

ವಿಜಯದಶಮಿಯಾದ ಅ.20 ಮಂಗಳವಾರ ಬೆಳಿಗ್ಗೆ ಗಂಟೆ 7:00ಕ್ಕೆ ಪ್ರಸನ್ನ ಪೂಜೆ, 8:00ಕ್ಕೆ ಅಕ್ಷರ ಅಭ್ಯಾಸ ನೆರವೇರಿತು. ಬಳಿಕ 11:30ಕ್ಕೆ ನರ್ಸಪ್ಪ ಪೂಜಾರಿ ನಿಡ್ಯ, ಅಧ್ಯಕ್ಷರು ಶ್ರೀ ದೇವತಾ ಸಮಿತಿ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು ಅಳಿಕೆಯ ಪ್ರಾಂಶುಪಾಲರಾದ ವೆಂಕಟಕೃಷ್ಣ ಶರ್ಮಾ ಬಿ, ರೋಟರಿ ಕ್ಲಬ್ ವಿಟ್ಲದ ದಾಸಪ್ಪ ಪೂಜಾರಿ ಎನ್, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷರು ಲಯನ್ ಶ್ವೇತಾ ರವಿಕುಮಾರ್, ಜೆಸಿಐ ವಿಟ್ಲದ ಅಧ್ಯಕ್ಷರು ಜೆಸಿ ಸಂದೀಪ್ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸರಿಗಮಪ ಟೈಟಲ್ ವಿನ್ನರ್ ಅಶ್ಮಿತ್ ಎ ಜೆ ಯವರನ್ನು ಗೌರವಿಸಿ ಸನ್ಮಾನಿಸಾಲಾಯಿತು.

ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ವಿಸರ್ಜನಾ ಆರತಿ, ಅನ್ನಸಂತರ್ಪಣೆ ನಡೆದ ಬಳಿಕ 3:00ಕ್ಕೆ ಕರ್ನಾಟಕ ಕಲಾಶ್ರೀ ಡಾ| ಪಿ.ಕೆ. ದಾಮೋದರ್ ಮತ್ತು ಬಳಗದವರಿಂದ “ವಾದ್ಯಗೋಷ್ಠಿ” ನಡೆಯಿತು.

ಸಂಜೆ 4:30ಕ್ಕೆ ಆಕರ್ಷಕ ಸ್ತಬ್ಧ ಚಿತ್ರದೊಂದಿಗೆ ಶ್ರೀ ದೇವಿಯ ವೈಭವದ ಶೋಭಾಯಾತ್ರೆ ನಡೆದು, ಶ್ರೀ ಅನಂತೇಶ್ವರ ದೇವಸ್ಥಾನದ ಕೆರೆಯ ಬಳಿ ಪೂಜೆ, “ವಂದೇ ಮಾತರಂ”, “ಧ್ವಜಾವತರಣ”ದ ನಂತರ ಕೆರೆಯಲ್ಲಿ ಶ್ರೀ ದೇವಿಯ ವಿಗ್ರಹ ವಿಸರ್ಜನೆಯೊಂದಿಗೆ ಶಾರದೋತ್ಸವ ಸಂಪನ್ನಗೊಂಡಿತು.

- Advertisement -

Related news

error: Content is protected !!