Wednesday, October 28, 2026
spot_imgspot_img
spot_imgspot_img

ನಟ ಧನ್ವೀರ್ ಗೆ ಮತ್ತೊಂದು ಸಂಕಷ್ಟ – 10 ಕೋಟಿ ಅಕ್ರಮ ನಗದು ವ್ಯವಹಾರ ಆರೋಪ, ಇಡಿ-ಐಟಿಗೆ ದೂರು

- Advertisement -
- Advertisement -

ಕನ್ನಡ ಚಿತ್ರರಂಗದ ಖ್ಯಾತ ನಟ ಧನ್ವೀರ್ ವಿರುದ್ಧ ದೂರುಗಳ ಸರಮಾಲೆ ಮುಂದುವರಿದಿದ್ದು, ನಾಲ್ಕನೇ ದೂರು ದಾಖಲಾದ ಬೆನ್ನಲ್ಲೇ ನಟನ ವಿರುದ್ಧ ಇಡಿ ಮತ್ತು ಐಟಿ ಇಲಾಖೆಗೆ ದೂರು ನೀಡಲಾಗಿದೆ.

ಹೈಕೋರ್ಟ್ ವಕೀಲ ಪ್ರಶಾಂತ್ ಮೆತಲ್ ರಿಂದ ದೂರು ನೀಡಿದ್ದು, ಎರಡು ಲಕ್ಷ ಮೇಲ್ಪಟ್ಟು ನಗದು ವ್ಯವಹಾರ ಅಕ್ರಮ ಹಾಗೂ ಧನ್ವೀರ್ ಮತ್ತು ವಿಜಯಲಕ್ಷ್ಮಿ ಕಾನೂನುಬಾಹಿರವಾಗಿ ವ್ಯವಹಾರ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಅಕ್ರಮ ವ್ಯವಹಾರ ಸಂಬಂಧ ತನಿಖೆ ನಡೆಸುವಂತೆ ದೂರಿನಲ್ಲಿ ತಿಳಿಸಲಾಗಿದ್ದು ಇಡಿ ಹಾಗೂ ಆದಾಯ ತೆರಿಗೆ ಇಲಾಖೆ ನಿರ್ದೇಶಕರಿಗೆ ದೂರು ನೀಡಲಾಗಿದೆ. ಸಾಮಾನ್ಯರಿಗೂ ಹಾಗೂ ಶ್ರೀಮಂತರಿಗೂ ಕಾನೂನು ಒಂದೇ. ದರ್ಶನ್ ಕೇಸಿನ ಕಾನೂನು ಪ್ರಕ್ರಿಯೆ ಸಂಬಂಧ ಕಾನೂನು ಬಾಹಿರವಾಗಿ ಕೋಟಿ ಕೋಟಿ ಹಣದ ವ್ಯವಹಾರ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಎರಡು ಲಕ್ಷಕ್ಕು ಮೀರಿ ನಗದು ವ್ಯವಹಾರ ನಡೆಸುವಂತಿಲ್ಲ. ಆದರೆ ಹತ್ತು ಕೋಟಿ ಹಣ ನಗದು ರೂಪದಲ್ಲಿ ವಹಿವಾಟು ನಡೆಸಲಾಗಿದೆ. ಹಣದ ಮೂಲ ಹಾಗೂ ಅಕ್ರಮ ವಹಿವಾಟಿನ ಬಗ್ಗೆ ತನಿಖೆ ನಡೆಸಬೇಕೆಂದು ದೂರು ನೀಡಲಾಗಿದೆ.
ಈಗಾಗಲೇ ನಟ ಧನ್ವೀರ್ ವಿರುದ್ಧ 3 ಕೇಸ್ ದಾಖಲಾಗಿದ್ದು, ಇದೀಗ ಸಚಿವ ಜಮೀರ್ ಅಹ್ಮದ್ ಮತ್ತು ನಟ ಜೈದ್ ಖಾನ್ ಗೆ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

ಆಡಿಯೋ ಒಂದರಲ್ಲಿ ಜೈದ್ ಖಾನ್ ಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದು ಜಮೀರ್ ಅಹ್ಮದ್ ಅಭಿಮಾನಿಗಳಿಂದ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಾಮರಾಜಪೇಟೆ ಠಾಣೆಗೆ ದೂರು ನೀಡಿದ ಜಮೀರ್ ಅಹಮದ್ ಅಭಿಮಾನಿಗಳು ಧನ್ವೀರ್ ಮುಖಕ್ಕೆ ಮಸಿ ಹಾಕಿರುವ ಪೋಟೋ ಹಿಡಿದು ಪ್ರತಿಭಟನೆ ಮಾಡಿ, ನಟ ಧನ್ವೀರ್ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ ಬಳಿಕ ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜೈದ್ ಖಾನ್ ಅಭಿಮಾನಿ ವಿನಾಯಕ ಕೊಟ್ಟಿರುವ ಹೇಳಿಕೆಯಂತೆ, ಧನ್ವೀರ್ ಸೋಶಿಯಲ್ ಮೀಡಿಯಾದಲ್ಲಿ ಜಮೀರ್ ಅಹಮದ್ ಅವರ ಮಗ ಜೈದ್ ಖಾನ್ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಅವರನ್ನು ಬಂದಿಸಬೇಕು ಅಂತ ದೂರು ದಾಖಲಿಸಿದ್ದಾರೆ. ಈಗಾಗಲೇ ಹಲವು ಕಡೆ ದೂರು ದಾಖಲಾಗಿದೆ. ಎನ್ ಸಿಆರ್ ಆಗಿದೆ ಈಗ ಎಫ್ಐಆರ್ ಆಗಬೇಕು. ಹಾಗೇ ಬಂಧಿಸಬೇಕು, ಕ್ರಮ ಆಗಬೇಕು ಎಂದಿದ್ದಾರೆ.

ದರ್ಶನ್ ಫ್ಯಾಮಿಲಿ ಜೊತೆ ಯಾರು ಹೋಗೋದು ಧನ್ವೀರ್ ಗೆ ಇಷ್ಟ ಇಲ್ಲ. ಈಗ ಜೈದ್ ಖಾನ್ ದರ್ಶನ್ ಫ್ಯಾಮಿಲಿ ಚೆನ್ನಾಗಿದ್ದಾರೆ. ಇನ್ನು ಎರಡು ದಿನದಲ್ಲಿ ಕ್ಷಮೆ ಕೇಳಿಲ್ಲ ಅಂದರೆ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ವಿನಾಯಕ್ ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!