Saturday, October 31, 2026
spot_imgspot_img
spot_imgspot_img

ಬಾಲ್ಕಿ ಎಟಿಎಂ ಕಳವು ಪ್ರಕರಣ: ನಾಲ್ವರ ಬಂಧನ; ಲಕ್ಷಾಂತರ ಮೌಲ್ಯದ ಸೊತ್ತು ವಶ

- Advertisement -
- Advertisement -

ಬೀದ‌ರ್: ಭಾಲ್ಕಿಯ ಹಿರೇಮರ್ ಸಂಸ್ಥಾನದ ಕಾಂಪ್ಲೆಕ್ಸ್ ನಲ್ಲಿರುವ ಎಟಿಎಂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, 12 ಲಕ್ಷ ರೂ. ನಗದು ಸೇರಿದಂತೆ ಒಟ್ಟು 32 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹೇಳಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಹರ್ಯಾಣ ರಾಜ್ಯದವರಾದ ಅಸು (40), ಅಸಿಫ್ (25), ಅನಿಷ್ (47) ಹಾಗೂ ರಾಜಸ್ಥಾನ ರಾಜ್ಯದ ಭರತಪುರ್ ಜಿಲ್ಲೆಯ ರಾಹುಲ್ (23) ಬಂಧಿತ ಆರೋಪಿಗಳಾಗಿದ್ದಾರೆ.ಅ.25ರಂದು ಮಧ್ಯರಾತ್ರಿ ಭಾಲ್ಕಿಯ ಹಿರೇಮರ್ ಸಂಸ್ಥಾನ ಮಠದ ಕಾಂಪ್ಲೆಕ್ಸ್ ನಲ್ಲಿರುವ ಎಟಿಎಂ ಒಳಗಡೆ ಪ್ರವೇಶಿಸಿದ ಕಳ್ಳರು ಗ್ಯಾಸ್ ಕಟರ್ ಬಳಸಿ 23 ಲಕ್ಷ 86 ರೂ. ಇರುವ ಎಟಿಎಂ ಕ್ಯಾಸ್ಕೆಟ್ ಬಾಕ್ಸ್ ಕಳವು ಮಾಡಿದ್ದರು.

ಪ್ರಕರಣವನ್ನು ಕೇವಲ ಐದು ದಿನಗಳಲ್ಲಿ ಭೇದಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.ಆರೋಪಿಗಳನ್ನು ಪತ್ತೆಹಚ್ಚಲು ನಾಲ್ಕು ತಂಡಗಳು ರಚಿಸಲಾಗಿತ್ತು. ಹಾಗೆಯೇ ಎಐ ಕ್ಯಾಮೆರಾದಿಂದ ಪರಿಶೀಲಿಸಿದಾಗ ಆರೋಪಿಗಳು ತೆಲಂಗಾಣದ ಹೈದರಾಬಾದ್ ಗೆ ಹೋಗಿರುವ ಬಗ್ಗೆ ಖಚಿತಪಡಿಸಿಕೊಂಡು ಅ.30ರಂದು ಹೈದ್ರಾಬಾದ್ ನ ಶಾಹಿನ್ ನಗರದಲ್ಲಿ ಅವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ 12 ಲಕ್ಷ ರೂ.ನಗದು, 20 ಲಕ್ಷ ರೂ. ಮೌಲ್ಯದ ಒಂದು ಕಾರು, ಸ್ಪೇ ಬಾಟಲ್, ಗ್ಯಾಸ್ ಕಟರ್ ಪೈಪ್, ಕಟಿಂಗ್ ಪ್ಲೇಯರ್, 2 ಮೊಬೈಲ್, 11 ವಿವಿಧ ರಾಜ್ಯಗಳ ನಂಬ‌ರ್ ಪ್ಲೇಟ್, ಗ್ಯಾಸ್ ಸಿಲಿಂಡ‌ರ್, ಆಕ್ಸಿಜನ್‌ ಸಿಲಿಂಡ‌ರ್ ಸೇರಿದಂತೆ ಹಲವು ವಸ್ತುಗಳು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

- Advertisement -

Related news

error: Content is protected !!