Sunday, November 1, 2026
spot_imgspot_img
spot_imgspot_img

ಶಿವಮೊಗ್ಗ:ಆಕ್ಸಲ್ ತುಂಡಾಗಿ KSRTC ಬಸ್ ಪಲ್ಟಿ- 13 ಮಂದಿಗೆ ಗಾಯ

- Advertisement -
- Advertisement -

ಶಿವಮೊಗ್ಗ: ಆಕ್ಸಲ್ ತುಂಡಾಗಿ KSRTC ಬಸ್ ಪಲ್ಟಿಯಾದ ಘಟನೆ ಸಾಗರದ ಬಾಪಟ್ ಕಲ್ಯಾಣ ಮಂಟಪದ ಬಳಿ ನಡೆದಿದೆ.

ಬಸ್‌ ಬೆಂಗಳೂರಿನಿಂದ ಸಾಗರಕ್ಕೆ ತೆರಳುತ್ತಿತ್ತು. ಈ ವೇಳೆ ಆಕ್ಸಲ್‌ ಬ್ಲೇಡ್‌ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿದೆ. ಬಸ್‌ನಲ್ಲಿ 41 ಜನ ಪ್ರಯಾಣಿಕರಿದ್ದರು. ಅದರಲ್ಲಿ ಚಾಲಕ, ನಿರ್ವಾಹಕ ಸೇರಿ 13 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಾಳುಗಳಿಗೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗದ ಸಾಗರ ಟೌನ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Related news

error: Content is protected !!