Monday, November 16, 2026
spot_imgspot_img
spot_imgspot_img

30ರ ಹರೆಯದಲ್ಲೇ 9 ಮದುವೆ ಆರೋಪ: ಹಣಕ್ಕಾಗಿ ಪತಿಗಳಿಗೆ ಕಿರುಕುಳವೆಂಬ ವಾದ; 7ನೇ ಪತಿಯ ವಿರುದ್ಧದ ಕೇಸ್ ರದ್ದುಪಡಿಸಿದ ಹೈಕೋರ್ಟ್

- Advertisement -
- Advertisement -

ಬೆಂಗಳೂರು: 30 ವರ್ಷ ವಯಸ್ಸಿನ ಮಹಿಳೆಯೊಬ್ಬರು ಒಂಬತ್ತು ಬಾರಿ ವಿವಾಹವಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯ ಏಳನೇ ಪತಿ ಎನ್ನಲಾದ ಹೊಸಪೇಟೆಯ ರಾಜಕಾರಣಿ ರಾಜಾ ಹುಸೇನ್ ವಿರುದ್ಧ ದಾಖಲಾಗಿದ್ದ ಕೌಟುಂಬಿಕ ಕ್ರೌರ್ಯ ಹಾಗೂ ವರದಕ್ಷಿಣೆ ಕಿರುಕುಳದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.ರಾಜಾ ಹುಸೇನ್ ಅವರು 2022ರ ಜನವರಿ 13ರಂದು ಮಹಿಳೆಯನ್ನು ವಿವಾಹವಾಗಿದ್ದರು.

ಆದರೆ ಕೆಲವೇ ದಿನಗಳಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಬಳಿಕ ಮಹಿಳೆ ಪತಿಯ ವಿರುದ್ಧ ಕೌಟುಂಬಿಕ ಕ್ರೌರ್ಯ, ಹಲ್ಲೆ, ನಿಂದನೆ ಹಾಗೂ ಜೀವ ಬೆದರಿಕೆ ಆರೋಪದಡಿ ಉಡುಪಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಪೊಲೀಸರು ತನಿಖೆ ನಡೆಸಿ ಹುಸೇನ್ ವಿರುದ್ಧ ಆರೋಪಪಟ್ಟಿಯನ್ನೂ ಸಲ್ಲಿಸಿದ್ದರು.ಇದನ್ನು ಪ್ರಶ್ನಿಸಿ ರಾಜಾ ಹುಸೇನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಮಹಿಳೆಯ ಹಿಂದಿನ ವಿವಾಹಗಳ ವಿಚಾರ ಮುನ್ನೆಲೆಗೆ ಬಂದಿತ್ತು. ಮಹಿಳೆಗೆ ಒಟ್ಟು ಒಂಬತ್ತು ಮದುವೆಗಳಾಗಿವೆ ಎಂದು ಹುಸೇನ್ ಪರ ವಕೀಲರು ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ ಮಹಿಳೆ ವಿಚಾರಣೆ ವೇಳೆ ನಾಲ್ಕು ಮದುವೆಗಳಾಗಿವೆ ಎಂದು ಹೇಳಿದ್ದರೆನ್ನಲಾಗಿದೆ.ಪ್ರತಿ ಮದುವೆಯ ಬಳಿಕ ಪತಿಯ ವಿರುದ್ಧ ಕಿರುಕುಳದ ಪ್ರಕರಣ ದಾಖಲಿಸಿ, ನಂತರ ಹಣಕಾಸಿನ ಒಪ್ಪಂದದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲಾಗುತ್ತಿತ್ತು ಎಂಬ ಆರೋಪವನ್ನೂ ಹುಸೇನ್ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠವು, ಈ ನಿರ್ದಿಷ್ಟ ಪ್ರಕರಣದಲ್ಲಿ ಮಹಿಳೆಯ ಆರೋಪಗಳಿಗೆ ತನಿಖಾ ವರದಿಗಳಲ್ಲಿ ಸಮರ್ಥನೆ ದೊರೆತಿಲ್ಲ ಎಂದು ಅಭಿಪ್ರಾಯಪಟ್ಟು, ಹುಸೇನ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ.

ಆದರೆ, ಮಹಿಳೆಯ ಹಿಂದಿನ ವಿವಾಹಗಳ ಆಧಾರದಲ್ಲಿ ಅವರ ಚಾರಿತ್ರ್ಯವನ್ನು ಪ್ರಶ್ನಿಸುವಂತಿಲ್ಲ ಅಥವಾ ಅವರ ದೂರುಗಳನ್ನು ಸಾಮಾನ್ಯವಾಗಿ ತಳ್ಳಿಹಾಕುವಂತಿಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

- Advertisement -

Related news

error: Content is protected !!