- Advertisement -
- Advertisement -



ಬೆಂಗಳೂರು: ಬಸವ ಮಂಟಪ ಕೃತಿ ವಿವಾದ, ಲೇಖಕ ರವಿ ಹಂಜ್ ರನಿರೀಕ್ಷಣಾ ಜಾಮೀನು ಅರ್ಜಿಯ ಅದೇಶವನ್ನು 56 ನೇ ಸಿಸಿಎಚ್ ನ್ಯಾಯಾಲಯ ಕಾಯ್ದಿರಿಸಿದೆ.

ಬಸವ ಮಂಟಪ ಕೃತಿ ವಿವಾದ ಸಂಬಂಧ ಎಫ್ ಐ ಆರ್ ದಾಖಲಾದ ಕಾರಣ ಬಂಧನ ಭೀತಿಯಲ್ಲಿರುವ ರವಿ ಹಂಜ್ ಇಂದು 56 ಸಿಸಿಎಚ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅದೇಶ ಕಾಯ್ದಿರಿಸಿದೆ.ರವಿ ಹಂಜ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಾಡಿ, ಎರಡು ವರ್ಷಗಳಿಂದ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗುತ್ತಿತ್ತು. ಆಗ ಲೇಖನಗಳಿಗೆ ಯಾರು ಅಕ್ಷೇಪಣೆ ಸಲ್ಲಿಸಲಿರಲಿಲ್ಲ. ಈಗ ಅದೇ ಲೇಖನ ಪುಸ್ತಕ ಆದಾಗ ದೂರು ನೀಡಿದ್ದಾರೆ.
ಇದು ರಾಜಕೀಯ ಪ್ರೇರಿತ ದೂರು ಎಂದು ಅವರು ವಾದ ಮಂಡಿಸಿದ್ದಾರೆ.ಈ ವೇಳೆ ಯಾರು ಯಾರ ಬಗ್ಗೆ ಹೇಗಾದ್ರೂ ಪುಸ್ತಕ ಬರೆಯಬಹುದೇ, ಬೇರೆಯವರ ಭಾವನೆಗೆ ಧಕ್ಕೆ ತರಬಹುದೇ ಅಂತ ನ್ಯಾಯಾಧೀಶರ ಮೋಹನ್ ಪ್ರಶ್ನೆ ಮಾಡಿದ್ದಾರೆ.ನಂತರ ಎರಡು ಕಡೆ ವಾದ ಆಲಿಸಿದ ನ್ಯಾಯಾಲಯ ಅದೇಶವನ್ನು ಕಾಯ್ದಿರಿಸಿದೆ.
- Advertisement -







