Wednesday, November 25, 2026
spot_imgspot_img
spot_imgspot_img

ರಾಣೆಬೆನ್ನೂರು: ನಕಲಿ ನೋಟು ಚಲಾವಣೆ ಜಾಲ ಪತ್ತೆ; ಇಬ್ಬರ ಬಂಧನ

- Advertisement -
- Advertisement -

ಹಾವೇರಿ: ಬ್ಯಾಂಕ್‌ ಎಟಿಎಂನಲ್ಲೇ ನಕಲಿ ನೋಟುಗಳನ್ನು ಜಮೆ ಮಾಡಲು ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, 500 ಮುಖಬೆಲೆಯ 76 ನಕಲಿ ನೋಟುಗಳನ್ನು ವಶಕ್ಕೆ ಪಡೆದಿರುವ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ.ಬಂಧಿತರನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೇಡೇರಿ ಗ್ರಾಮದ ಸುರೇಶ ಬಿಲ್ಲಾಳ ಹಾಗೂ ಮಾಲತೇಶ ಮೈಲಾರ ಎಂದು ಗುರುತಿಸಲಾಗಿದೆ.ಆರೋಪಿಗಳು ರಾಣೆಬೆನ್ನೂರಿನ ಎಸ್‌ಬಿಐ ಎಟಿಎಂನಲ್ಲಿ 500 ರೂಪಾಯಿ ಮುಖಬೆಲೆಯ 76 ನಕಲಿ ನೋಟುಗಳನ್ನು ಜಮೆ ಮಾಡಲು ಯತ್ನಿಸಿದ್ದರು.

ಈ ವೇಳೆ ಎಟಿಎಂ ಯಂತ್ರವು ನಕಲಿ ನೋಟುಗಳನ್ನು ಪತ್ತೆಹಚ್ಚಿ ಬ್ಯಾಂಕ್‌ಗೆ ಅಲರ್ಟ್ ನೀಡಿದೆ. ಬಳಿಕ ಬ್ಯಾಂಕ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಅಸಲಿ 500 ರೂಪಾಯಿ ನೋಟುಗಳನ್ನು ಸ್ಕ್ಯಾನ್ ಮಾಡಿ ನಕಲಿ ನೋಟುಗಳನ್ನು ತಯಾರಿಸಿರುವ ಶಂಕೆ ವ್ಯಕ್ತವಾಗಿದೆ. ನಕಲಿ ನೋಟುಗಳಲ್ಲಿ ‘ಚಿಲ್ಮನ್ಸ್ ಬ್ಯಾಂಕ್ ಆಫ್ ಇಂಡಿಯಾ’ ಎಂಬ ಹೆಸರನ್ನು ನಮೂದಿಸಿರುವುದು ಗಮನಕ್ಕೆ ಬಂದಿದೆ. ನಕಲಿ ನೋಟುಗಳ ತಯಾರಿಕೆ ಹಾಗೂ ಚಲಾವಣೆಯ ಹಿಂದಿರುವ ಮೂಲವನ್ನು ಪತ್ತೆ ಹಚ್ಚಲು ರಾಣೆಬೇನ್ನೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ರಾಣೆಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!