


ಮಂಗಳೂರು: ಇಸ್ರೇಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಶಕ್ತಿನಗರದ ಕಾರ್ಮಿಕ ಕಾಲನಿ ನಿವಾಸಿ ಶಡ್ರಾಕ್ ಇಮ್ಯಾನುಯೆಲ್ (ಮನು) ಮೃತದೇಹದ ಅಂತ್ಯಕ್ರಿಯೆ ಬುಧವಾರ ನಗರದ ಗೋರಿಗುಡ್ಡೆ ಸ್ಮಶಾನದಲ್ಲಿ ನೆರವೇರಿತು.

ಕುಟುಂಬಸ್ಥರ ಪ್ರಕಾರ, ಶಡ್ರಾಕ್ ಅವರು ಅ.16 ರಂದು ರಾತ್ರಿ 8.49 ಕ್ಕೆ ತಮ್ಮ ಪತ್ನಿಗೆ ಸಂದೇಶ ಕಳುಹಿಸುವ ಮೂಲಕ ಕೊನೆಯದಾಗಿ ಸಂಪರ್ಕದಲ್ಲಿದ್ದರು. ಸಂದೇಶ ಕಳುಹಿಸುವ ಸ್ವಲ್ಪ ಸಮಯದ ಮೊದಲು ಅವರು ಕುಟುಂಬ ಸದಸ್ಯರೊಂದಿಗೆ ವೀಡಿಯೊ ಕರೆಯ ಮೂಲಕವೂ ಮಾತನಾಡಿದ್ದರು. ಆ ಬಳಿಕ ಎಷ್ಟೇ ಬಾರಿ ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.ಅವರು ಕೆಲಸದ ಸ್ಥಳಕ್ಕೂ ಹಾಜರಾಗದ ಕಾರಣ ಆತಂಕಗೊಂಡ ಪತ್ನಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಸಂಸದ ಬ್ರಿಜೇಶ್ ಚೌಟ ಮತ್ತು ಸಚಿವ ಯು.ಟಿ. ಖಾದರ್ ಅವರಲ್ಲಿ ನೆರವಿಗಾಗಿ ಮನವಿ ಮಾಡಿದ್ದರು.
ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ದೂರು ನೀಡಿ, ಅ. 21 ರಂದು ಕುಟುಂಬಸ್ಥರು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಇಮೇಲ್ ಮೂಲಕ ಸಂಪರ್ಕಿಸಿ, ಅವರನ್ನು ಪತ್ತೆಹಚ್ಚಲು ಸಹಾಯ ಕೋರಿದ್ದರು.ಬಳಿಕ ಶಡ್ರಾಕ್ ಅವರು ಅ.19ರಂದು ಮೃತಪಟ್ಟಿರುವುದಾಗಿ ಟೆಲ್ ಅವಿವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅವರ ಕುಟುಂಬಕ್ಕೆ ನೀಡಿರುವ ದಾಖಲೆಗಳಲ್ಲಿ ತಿಳಿಸಿತ್ತು. ಅವರು ಮೃತಪಟ್ಟ ಸುಮಾರು ಒಂದು ತಿಂಗಳ ನಂತರ ಅವರ ಮೃತದೇಹವನ್ನು ಭಾರತಕ್ಕೆ ತರಲಾಗಿದೆ.ಪಾರ್ಥಿವ ಶರೀರವನ್ನು ತಾಯ್ಕಾಡಿಗೆ ತರಲು ರಾಯಭಾರ ಕಚೇರಿಯ ಕಾನ್ಸುಲರ್ ವಿಭಾಗವು ನ.9ರಂದು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿತ್ತು. ಶಡ್ರಾಕ್ ಅವರ ಪತ್ನಿ ಡೈಸಿ ಅವರ ಮನವಿಯ ಮೇರೆಗೆ, ಮಂಗಳೂರಿನಲ್ಲಿರುವ ಸಂಬಂಧಿಕರಿಗೆ ಮೃತದೇಹವನ್ನು ಹಸ್ತಾಂತರಿಸಲು ರಾಯಭಾರ ಕಚೇರಿ ಅನುಮತಿ ನೀಡಿತ್ತು.
ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು, ಸಾವಿನ ಸುತ್ತಲಿನ ಸನ್ನಿವೇಶಗಳನ್ನು ಪ್ರಶ್ನಿಸಿದ್ದಾರೆ ಮತ್ತು ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಇಸ್ರೇಲಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.ಪಾರ್ಥಿವ ಶರೀರವನ್ನು ತಾಯ್ಕಾಡಿಗೆ ತರಲು ರಾಯಭಾರ ಕಚೇರಿಯ ಕಾನ್ಸುಲರ್ ವಿಭಾಗವು ನ.9ರಂದು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿತ್ತು. ಶಡ್ರಾಕ್ ಅವರ ಪತ್ನಿ ಡೈಸಿ ಅವರ ಮನವಿಯ ಮೇರೆಗೆ, ಮಂಗಳೂರಿನಲ್ಲಿರುವ ಸಂಬಂಧಿಕರಿಗೆ ಮೃತದೇಹವನ್ನು ಹಸ್ತಾಂತರಿಸಲು ರಾಯಭಾರ ಕಚೇರಿ ಅನುಮತಿ ನೀಡಿತ್ತು.ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು, ಸಾವಿನ ಸುತ್ತಲಿನ ಸನ್ನಿವೇಶಗಳನ್ನು ಪ್ರಶ್ನಿಸಿದ್ದಾರೆ ಮತ್ತು ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಇಸ್ರೇಲಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಮಂಗಳೂರಿನ ನೇಮಕಾತಿ ಏಜೆನ್ಸಿಯೊಂದರ ಮೂಲಕ 2025ರ ಮೇ 16ರಂದು ಉದ್ಯೋಗ ವೀಸಾದಲ್ಲಿ ಇಸ್ರೇಲ್‌ಗೆ ತೆರಳಿದ್ದರು. ಶಡ್ರಾಕ್ ಇಮ್ಯಾನುಯೆಲ್ ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿರುವ ಇಸ್ರೇಲಿ ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದರು, ನಂತರ ನಜರೆತ್ ಬಳಿಯ ನೊಫ ಹಗಲಿಲ್‌ನಲ್ಲಿರುವ ಯುಸಿಟಿ ಫೂಯಿಡ್ ಸೊಲ್ಯೂಷನ್ಸ್ ಸಂಸ್ಥೆಗೆ ಸೇರಿ ಅಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು 3 ತಿಳಿದುಬಂದಿದೆ.








