Saturday, November 21, 2026
spot_imgspot_img
spot_imgspot_img

ಅಡಿಕೆ ನುಂಗಿ ಒಂದು ವರ್ಷದ ಮಗು ಸಾವು!

- Advertisement -
- Advertisement -

ತೀರ್ಥಹಳ್ಳಿ: ಒಂದು ವರ್ಷದ ಮಗುವೊಂದು ಅಡಿಕೆ ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದ ಧಾರುಣ ಘಟನೆ ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆದ್ದೂರಿನಲ್ಲಿ ನಡೆದಿದೆ.

ಹೆದ್ದೂರು ನಿವಾಸಿಗಳಾದ ಸಂದೇಶ ಮತ್ತು ಪ್ರಿಯಾಂಕ ರವರ ಒಂದು ವರ್ಷದ ಗಂಡು ಮಗು ಹರಿವಾಣ ತಟ್ಟೆಯಲ್ಲಿದ್ದ ಅಡಿಕೆಯನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ.

ಮಗುವಿನ ತಂದೆ ತಾಯಿ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಕರೋನಾ ಸಂದರ್ಭದಿಂದ ತನ್ನ ಹೆದ್ದೂರು ಮನೆಯಲ್ಲಿ ಮಗುವನ್ನು ಬಿಟ್ಟಿದ್ದರು. ಇತ್ತೀಚೆಗೆ ಆರೋಗ್ಯ ಇಲಾಖೆ ಆಯೋಜಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಉತ್ತಮ ಆರೋಗ್ಯವಂತ ಮಗು ಎಂದು ಪ್ರಥಮ ಬಹುಮಾನದ ಜೊತೆಗೆ ನಗದು ಪುರಸ್ಕಾರ ಪಡೆದಿತ್ತು ಎನ್ನಲಾಗಿದೆ.

- Advertisement -

Related news

error: Content is protected !!