Saturday, November 21, 2026
spot_imgspot_img
spot_imgspot_img

ಫೇಸ್‍ಬುಕ್ ಫ್ರೆಂಡ್ ಭೇಟಿಗೆ ಕೇರಳಕ್ಕೆ ಹೋಗಿ ಕೋಟ್ಯಧಿಪತಿಯಾದ ಮಂಡ್ಯದ ಯುವಕ!

- Advertisement -
- Advertisement -

ಮಂಡ್ಯ: ಫೇಸ್‍ಬುಕ್ ಫ್ರೆಂಡ್ ಭೇಟಿ ಮಾಡಲು ಹೋದ ಮಂಡ್ಯದ ಯುವಕನಿಗೆ ಅದೃಷ್ಟ ಖುಲಾಯಿಸಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಉದ್ಯಮಿ ಪುತ್ರ ಸೋಹನ್ ಬಲರಾಮ್ ಅವರು ಕೇರಳದ ಲಾಟರಿಯಲ್ಲಿ ಕೋಟಿ ಗೆದ್ದು ಬೀಗಿದ್ದಾರೆ. ಈ ಮೂಲಕ ಮಂಡ್ಯದ ಯುವಕನನ್ನು ಕೇರಳದ ಲಾಟರಿ ಕೋಟ್ಯಧಿಪತಿಯನ್ನಾಗಿ ಮಾಡಿದೆ.

ಶನಿವಾರ ಸೋಹನ್ ಅವರು ಫೇಸ್‍ಬುಕ್ ಫ್ರೆಂಡ್ ಭೇಟಿ ಮಾಡಲು ಕೇರಳದ ಪುಥನಾಥಗೆ ತೆರಳಿದ್ದರು. ಹಾಗೆಯೇ ಸ್ನೇಹಿತನನ್ನು ಭೇಟಿ ಮಾಡಿ ವಾಪಸ್ ಬರುವಾಗ 100 ರೂ. ಕೊಟ್ಟು ಸ್ನೇಹಿತರ ಒತ್ತಾಯದ ಮೇರೆಗೆ ಪುಥನಾಥಿಯಲ್ಲಿನ ಅಂಗಡಿಯಲ್ಲಿ ಭಾಗ್ಯಧಾರ ಲಾಟರಿ ಖರೀದಿಸಿದ್ದರು.

ಇದೀಗ ಸೋಹನ್ ಕೊಂಡಿದ್ದ ಲಾಟರಿ ಸಂಖ್ಯೆಗೆ ಕೋಟಿ ರೂ. ಬಂಪರ್ ಬಹುಮಾನ ಬಂದಿದೆ.ಸದ್ಯ ಕೋಟಿ ರೂ. ಬಂಪರ್ ಬಂಪರ್ ಬಹುಮಾನದಿಂದ ಸೋಹನ್ ಬಲರಾಂ ಕುಟುಂಬ ಫುಲ್ ಖುಷ್ ಆಗಿದೆ.

- Advertisement -

Related news

error: Content is protected !!