Wednesday, June 24, 2026
spot_imgspot_img
spot_imgspot_img

ನಕಲಿ ಟ್ವೀಟರ್ ಖಾತೆ ಬ್ಲಾಕ್- ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

- Advertisement -
- Advertisement -

ನವದೆಹಲಿ: ಕೇಂದ್ರ ಸರ್ಕಾರ ಮೈಕ್ರೋ ಬ್ಲಾಗಿಂಗ್ ವೆಬ್​ಸೈಟ್ ಟ್ವಿಟರ್ ವಿರುದ್ಧ ತಿರುಗಿಬೀಳುತ್ತಿದ್ದಂತೆಯೇ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಚೋದಕಾರಿ ವಿಚಾರಗಳನ್ನ ಟ್ವೀಟ್ ಮಾಡುತ್ತಿದ್ದ ಸುಮಾರು 97 ಪ್ರತಿಷ್ಟಿತ ಅಕೌಂಟ್​​ಗಳನ್ನ ಬ್ಲಾಕ್ ಮಾಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇನ್ನು ಬ್ಲಾಕ್ ಮಾಡಲಾದ ಅಕೌಂಟ್​ಗಳಲ್ಲಿ ಬಹುತೇಕ ಖಾತೆಗಳು ಪಾಕಿಸ್ತಾನ ಮತ್ತು ಖಲಿಸ್ತಾನ ಬೆಂಬಲಿಗರಿಂದ ಬಳಕೆಯಾಗುತ್ತಿದ್ದವು ಎನ್ನಲಾಗಿದೆ. ಒಟ್ಟು 1,435 ಅಕೌಂಟ್​ಗಳನ್ನ ಟ್ವಿಟರ್ ಗುರುತು ಮಾಡಿದ್ದು ಈ ಪೈಕಿ 1,398 ಅಕೌಂಟ್​ಗಳನ್ನ ಬ್ಲಾಕ್ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.

ಈ ಪೈಕಿ 257 ಅಕೌಂಟ್​​ಗಳು (#genocide) ನರಮೇಧ ಹೆಸರಿನ ಹ್ಯಾಷ್​​ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದವು. ಇವುಗಳನ್ನ ಬ್ಲಾಕ್ ಮಾಡಲಾಗಿದೆ. ಕೆಲವು ಅಕೌಂಟ್​​ಗಳು ಡೂಪ್ಲಿಕೇಟ್ ಆಗಿರುವುದರಿಂದ ಅವುಗಳನ್ನ ಬ್ಲಾಕ್ ಮಾಡುವ ಪ್ರಮೇಯಿಲ್ಲ.

ಇನ್ನು ಸಿಪಿಎಮ್​ ಮೊಹಮ್ಮದ್ ಸಲೀಂ ಮತ್ತು ಕ್ಯಾರವಾನ್ ಮ್ಯಾಗಜೀನ್​ನ ಅಕೌಂಟ್​​ಗಳು ಈಗಲೂ ಚಾಲ್ತಿಯಲ್ಲಿವೆ. 1,178 ಅಕೌಂಟ್​ಗಳನ್ನು ಸರ್ಕಾರವೇ ಫ್ಲಾಗ್ ಮಾಡಿದೆ.. ಖಲಿಸ್ತಾನಿ ಮತ್ತು ಪಾಕಿಸ್ತಾನಿ ಶಕ್ತಿಗಳಿಂದ ಬಳಕೆಯಾಗುತ್ತಿದ್ದ ಅಕೌಂಟ್​ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಸರ್ಕಾರ ಮೂಲಗಳು ಹೇಳಿವೆ.

ಇನ್ನುಳಿದ ಕೆಲವು ಅಕೌಂಟ್​ಗಳೂ ಸಹ ಬ್ಲಾಕ್ ಆಗಲಿವೆ. ಆದರೆ ಅವುಗಳನ್ನ ಬ್ಲಾಕ್ ಮಾಡುವ ಮುನ್ನ ಬಳಕೆದಾರರಿಗೆ ನೋಟಿಸ್ ಕಳುಹಿಸುವಂಥ ಪ್ರಕ್ರಿಯೆಗಳನ್ನ ಫಾಲೋ ಮಾಡಬೇಕಿದ್ದು ಇದಕ್ಕಾಗಿ ಸಮಯ ಹಿಡಿಯುತ್ತದೆ ಎಂದು ಟ್ವಿಟರ್ ಸರ್ಕಾರಕ್ಕೆ ತಿಳಿಸಿದೆ ಎನ್ನಲಾಗಿದೆ.

- Advertisement -

Related news

error: Content is protected !!