Tuesday, September 1, 2026
spot_imgspot_img
spot_imgspot_img

ಶ್ರೀಗಂಧವನ್ನು ಕಳ್ಳ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ – 12. ಕೆ.ಜಿ. ಶ್ರೀಗಂಧ ವಶ

- Advertisement -
- Advertisement -

ಕಾರವಾರ: ಶ್ರೀಗಂಧವನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಶಿರಸಿಯ ಹುಲೇಕಲ್ ವಲಯದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಮನಜವಳ್ಳಿಯ ಕೃಷ್ಣ ಗೌಡ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 12. ಕೆ.ಜಿ. ತೂಕದ ಶ್ರೀ ಗಂಧ ಹಾಗೂ ಕೃತ್ಯಕ್ಕೆ ಬಳಸಲಾದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶಿರಸಿ ತಾಲೂಕಿನ ಹುಲೆಕಲ್ ವಲಯದ ಶೀಗೆಹಳ್ಳಿ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಈತ ಶ್ರೀಗಂಧವನ್ನು ಕಳ್ಳತನ ಮಾಡುತ್ತಿದ್ದ. ಈ ವಿಚಾರವಾಗಿ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದು ಆತನನ್ನು ಬಂಧಿಸಿದ್ಧಾರೆ.

- Advertisement -

Related news

error: Content is protected !!