Thursday, July 30, 2026
spot_imgspot_img
spot_imgspot_img

ಸಂಚುಕೊರರೊಂದಿಗೆ ಸೇರಿ ಯುವತಿ ವಿಡಿಯೋ ಬಿಡುಗಡೆ- ರಮೇಶ್ ಜಾರಕಿಹೊಳಿ

- Advertisement -
- Advertisement -

ಬೆಂಗಳೂರು: ಸಂತ್ರಸ್ತೆ ಎನ್ನುವ ಯುವತಿ ಬಿಡುಗಡೆ ಮಾಡಿರುವ ವಿಡೀಯೋ ಕುರಿತು ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಯುವತಿ ಸಂಚುಕೋರರೊಂದಿಗೆ ಸೇರಿಕೊಂಡು ಈ ವಿಡೀಯೋ ಬಿಡುಗಡೆ ಮಾಡಿದ್ದಾಳೆ ಎಂದಿದ್ದಾರೆ.

ಇದೊಂದು ದೊಡ್ಡ ಷಢ್ಯಂತ್ರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ನಾನು ದೂರು ನೀಡಿ ಅರ್ಧ ಗಂಟೆ ನಂತರ ಅವರು ಈ ವಿಡೀಯೋ ಬಿಡುಗಡೆ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದೂ ಅವರು ಹೇಳಿದ್ದಾರೆ.

ಅವರು ಏನೇ ಮಾಡಲಿ ನಾನು ಮಾತ್ರ ಸುಮ್ಮನೇ ಬಿಡುವುದಿಲ್ಲ. ಷಢ್ಯಂತ್ರ ಮಾಡಿದವರನ್ನು ಜೈಲಿಗೆ ಹಾಕಿಸಿಯೇ ಹಾಕಿಸುತ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ.

- Advertisement -

Related news

error: Content is protected !!