ಬೆಂಗಳೂರು; ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್ ಬೆಂಗಳೂರು ನಗರದಿಂದ ಸಂಚಾರ ಆರಂಭಿಸಿದೆ. ಐಆರ್‌ಸಿಟಿಸಿ ರೈಲು ನರ‍್ವಹಣೆ ಮಾಡುವ ಜವಾಬ್ದಾರಿ ಹೊತ್ತಿದ್ದು, ಮೊದಲ ಬಾರಿಗೆ ಸಂಚಾರವನ್ನು ಪ್ರಾರಂಭಿಸಲಾಗಿದೆ.

ಭಾನುವಾರ ಯಶವಂತಪುರ ರೈಲು ನಿಲ್ದಾಣದಿಂದ ಗೋಲ್ಡನ್ ಚಾರಿಯಟ್ ರೈಲು ಸಂಚಾರ ಆರಂಭವಾಯಿತು. ‘ಪ್ರೈಡ್ ಆಫ್ ರ‍್ನಾಟಕ’ ಪ್ಯಾಕೇಜ್ ಪ್ರವಾಸಕ್ಕೆ ಇಂದು ಚಾಲನೆ ನೀಡಲಾಗಿದೆ.

ರೈಲು ನಿಲ್ದಾಣದಲ್ಲಿ ಗೋಲ್ಡನ್ ಚಾರಿಯಟ್ ರೈಲು ಸಿಬ್ಬಂದಿಗಳು ಪ್ರವಾಸಿಗರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬೇಸಿಗೆ ರಜೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ಐಷಾರಾಮಿ ರೈಲು ಸಂಚಾರವನ್ನು ಆರಂಭಿಸಲಾಗಿದೆ.

2008ರಲ್ಲಿ ಮೊದಲು ಗೋಲ್ಡನ್ ಚಾರಿಯಟ್ ಸಂಚಾರ ಆರಂಭಿಸಲಾಗಿತ್ತು. ಆಗ ಕೆಎಸ್‌ಟಿಡಿಸಿ ರೈಲಿನ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಆದರೆ, ನಷ್ಟದ ಕಾರಣ ರೈಲು ಸಂಚಾರ ರದ್ದಾಗಿತ್ತು. 2020ರಲ್ಲಿ ಐಆರ್‌ಸಿಟಿಸಿ ರೈಲು ನರ‍್ವಹಣೆಯನ್ನು ಪಡೆದುಕೊಂಡಿತ್ತು.

ಐಆರ್‌ಸಿಟಿಸಿ 6 ರಾತ್ರಿ 7 ಹಗಲುಗಳ ಪ್ರವಾಸಿ ಪ್ಯಾಕೇಜ್ ಪ್ರಯಾಣವನ್ನು ಭಾನುವಾರ ಆರಂಭಿಸಿದೆ. ಬೆಂಗಳೂರು ನಗರದಿಂದ ಹೊರಟಿರುವ ರೈಲು ಬಂಡೀಪುರ, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಹಂಪಿ, ಐಹೊಳೆ, ಪಟ್ಟದಕಲ್ಲು ಮತ್ತು ಗೋವಾಕ್ಕೆ ಭೇಟಿ ನೀಡಿ ಬೆಂಗಳೂರಿಗೆ ವಾಪಸ್ ಆಗಲಿದೆ.

