Wednesday, September 2, 2026
spot_imgspot_img
spot_imgspot_img

ಗುಣರಂಜನ್ ಶೆಟ್ಟಿ ಹುಟ್ಟು ಹಬ್ಬ ಆಚರಣೆ

- Advertisement -
- Advertisement -

ಕಾರವಾರ: ಉತ್ತರ ಕನ್ನಡ ಜಿಲ್ಲಾ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಯುವ ನಾಯಕರು ಸಂಘಟನೆ ಯ ಸಂಸ್ಥಾಪಕ ಅಧ್ಯಕ್ಷರಾದ ಬಿ ಗುಣರಂಜನ್ ಶೆಟ್ಟಿಯವರ ಹುಟ್ಟುಹಬ್ಬವನ್ನ ಆಚರಿಸಲಾಯಿತು.

ನಗರದ ಸುಭಾಶ್ ಸರ್ಕಲ್ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು ಹಾಗೂ ಕಾರ್ಯಕರ್ತರು ಸೇರಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬದ ಆಚರಿಸಲಾಯಿತು.

ಇದಾದ ನಂತರ ಶ್ರೀ ವೀರ ಗಣಪತಿ ದೇವಸ್ಥಾನದಲ್ಲಿ ಗುಣರಂಜನ್ ಶೆಟ್ಟಿಯವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕರ್ತರು ಗುಣರಂಜನ್ ಶೆಟ್ಟಿಯವರಿಗೆ ಆರೋಗ್ಯ ಆಯಸ್ಸು ಸಿಗಲೆಂದು ಬೇಡಿಕೊಂಡರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ದಿಲೀಪ್ ಜಿ ಅರ್ಗೇಕರ್, ಜಿಲ್ಲಾ ಕಾರ್ಯಧ್ಯಕ್ಷರಾದ ರೋಶನ್ ಹರಿಕಂತ್ರ, ಜಿಲ್ಲಾ ಮಹಿಳಾ ಘಟಕದ ಕಾರ್ಯಾಧ್ಯಕ್ಷರಾದ ರುಕ್ಮಿಣಿ ಗೌಡ, ಜಿಲ್ಲಾ ಸಹಕಾರ್ಯದರ್ಶಿ ರಾಜೇಶ್ ಹರಿಕಂತ್ರ, ತಾಲೂಕು ಅಧ್ಯಕ್ಷರಾದ ಮೋಹನ್ ಉಳ್ವೇಕರ್, ಸುಭಾಷ್ ಗುನಗಿ , ಗೋಪಾಲ ಗೌಡ, ಸುನಿಲ್ ತಾಂಡೇಲ, ಸಮೀರ, ಸುದೇಶ್ ನಾಯ್ಕ, ಸಂತೋಷ್ ಪೆಡ್ನೇಕರ್, ಅಕ್ಷಯ್ ದುರ್ಗೇಕರ್, ಅರವಿಂದ ಸೇರಿದಂತೆ ಹಲವು ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!