Sunday, October 18, 2026
spot_imgspot_img
spot_imgspot_img

ಮಂಗಳೂರು: ಅಕ್ರಮ ಗೋಲ್ಡ್ ಸ್ಮಗ್ಲಿಂಗ್- ಮೂವರನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು

- Advertisement -
- Advertisement -

ಮಂಗಳೂರು: ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿಯಿಂದ 92.27 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಉಳ್ಳಾಲದ ಮೊಹ್ಮದ್ ಆಸೀಫ್ ಬಂಧಿತ ವ್ಯಕ್ತಿ. 1.999ಕೆಜಿ ಚಿನ್ನದ ಪುಡಿಯನ್ನು ಅಂಟಿನೊಂದಿಗೆ ಬೆರೆಸಿ, ವಿಶೇಷವಾಗಿ ವಿನ್ಯಾಸ ಮಾಡಿದ ಒಳ ಉಡುಪು, ಜೀನ್ಸ್ ಪ್ಯಾಂಟ್ ಹಾಗೂ ಮೊಣಕಾಲು ಪಟ್ಟಿಯಲ್ಲಿ ಅಡಗಿಸಿ ಇಡಲಾಗಿತ್ತು. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತೆಯೇ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರಿಂದ 26 ಲಕ್ಷ ಮೌಲ್ಯದ ಚಿನ್ನವನ್ನು ಸಾಗಾಟ ಮಾಡುತ್ತಿದ್ದವರನ್ನೂ ವಶಕ್ಕೆ ಪಡೆಯಲಾಗಿದೆ.

- Advertisement -

Related news

error: Content is protected !!