Thursday, September 3, 2026
spot_imgspot_img
spot_imgspot_img

ಪ್ರಮುಖ ಜಂಕ್ಷನ್ ಗಳಲ್ಲಿ ತಟ್ಟೆ,ಲೋಟ ಹಿಡಿದು ಭಿಕ್ಷಾಟನೆ ಮಾಡಲು ಮುಂದಾಗಿರುವ ಸರ್ಕಾರಿ ನೌಕರರು!

- Advertisement -
- Advertisement -

ಬೆಂಗಳೂರು: ಯುಗಾದಿ ದಿನವೂ ಸರ್ಕಾರಿ ನೌಕರರಿಗೆ ವೇತನ ನೀಡಿಲ್ಲ ಎಂದು ಚಳುವಳಿ ಆರಂಭಿಸಿರುವ ನೌಕರರು, ಭಿಕ್ಷಾಟನಾ ಚಳುವಳಿಯನ್ನು ಹಮ್ಮಿಕೊಂಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ಕೂಡ ಸರ್ಕಾರ ತಾವು ದುಡಿದ ವೇತನವನ್ನು ನೀಡಿಲ್ಲ ಎಂದು ನೌಕರರು ಹೇಳಿದ್ದಾರೆ.

ayo

ಸಾರಿಗೆ ನೌಕರರ 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ನಿನ್ನೆ ತಟ್ಟೆಲೋಟ ಹಿಡಿದು ಪ್ರತಿಭಟನೆ ನಡೆಸಿದ್ದ ಕಾರ್ಮಿಕರು ಚಳುವಳಿ ಆರಂಭಿಸಿದ್ದರು. ಇಂದು ಮತ್ತೊಂದು ಸುತ್ತಿನ ಪ್ರತಿಭಟನೆಗೆ ಮುಂದಾಗಿದ್ದು,
ಪ್ರಮುಖ ಜಂಕ್ಷನ್ ಗಳಲ್ಲಿ ಸಾರಿಗೆ ನೌಕರರು ತಮ್ಮ ಕುಟುಂಬಸ್ಥರ ಜೊತೆಗೆ ತಟ್ಟೆ, ಲೋಟ ಹಿಡಿದು ಭಿಕ್ಷಾಟನೆ ಮಾಡಲು ಮುಂದಾಗಿದ್ದಾರೆ. ಇದರಿಂದ ಸರ್ಕಾರಕ್ಕೆ ಭಾರೀ ಮುಜುಗರ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

ವೇತನ ಹೆಚ್ಚಳ ಮಾಡುವವರೆಗೂ ಕರ್ತವ್ಯಕ್ಕೆ ಹಾಜರಾಗದಿರಲು ಸಾರಿಗೆ ನೌಕರರು ತೀರ್ಮಾನಿಸಿದ್ದಾರೆ. ಈ ನಡುವೆ ನಿನ್ನೆ, ಸರ್ಕಾರದ ಬೆದರಿಕೆಗಳಿಗೆ ಜಗ್ಗಿರುವ ಕೆಲವು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರನ್ನು ತಡೆದ ಸಾರಿಗೆ ನೌಕರರು, ನೀನು ನಿನ್ನ ಹೆಂಡ್ತಿ ಮಕ್ಕಳು ಚೆನ್ನಾಗಿರಲಿ ಎಂದು ಹಾರಹಾಕಿ ಸನ್ಮಾನ ಮಾಡುವ ಮೂಲಕ ಅವರಿಗೆ ಮುಜುಗರ ಸೃಷ್ಟಿಸಿದ್ದಾರೆ.

driving
- Advertisement -

Related news

error: Content is protected !!