Wednesday, September 2, 2026
spot_imgspot_img
spot_imgspot_img

ಲಾಕ್ ಡೌನ್ ಮೊದಲ ದಿನವೇ ಮಾರ್ಗಸೂಚಿಯಲ್ಲಿ ಬದಲಾವಣೆ: ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ 50% ಕೆಲಸ ನಿರ್ವಹಿಸಲು ಅನುಮತಿ ನೀಡಿದ ರಾಜ್ಯ ಸರ್ಕಾರ

- Advertisement -
- Advertisement -

ಬೆಂಗಳೂರು: ರಾಜ್ಯ ಸರ್ಕಾರ ಮತ್ತೊಮ್ಮೆ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದ್ದು, ಲಾಕ್ ಡೌನ್ ಪ್ರಾರಂಭವಾದ ಮೊದಲನೆ ದಿನವೇ ಸರಕಾರ ತನ್ನ ಹಿಡಿತ ಸಡಿಲಗೊಳಿಸಿದ್ದು, ಗಾರ್ಮೆಂಟ್ ಉತ್ಪಾದಕರ ಲಾಬಿಗೆ ಮಣಿದಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಶೇಕಡ 50 ಹಾಜರಾತಿಯೊಂದಿಗೆ ಕಾರ್ಯಾಚರಣೆಗೆ ಅನುಮತಿ ನೀಡಿದೆ.

ಬೆಂಗಳೂರು ಸುತ್ತಮುತ್ತ ಸುಮಾರು ಎಂಟು ಲಕ್ಷ ಕಾರ್ಮಿಕರು ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸಿದ್ಧಪಡಿಸಲಾಗಿರುವ ಉತ್ಪನ್ನಗಳನ್ನು ರಫ್ತು ಮಾಡಲು ಈ ವಿನಾಯಿತಿ ನೀಡಲಾಗಿದೆ. ಸಂಸ್ಥೆಗಳು ನೀಡಿರುವ ಗುರುತು ಪತ್ರ ತೋರಿಸಿ ಕಾರ್ಮಿಕರು ಕೆಲಸಕ್ಕೆ ಹಾಜರಾಗಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.

- Advertisement -

Related news

error: Content is protected !!