Wednesday, September 2, 2026
spot_imgspot_img
spot_imgspot_img

ಆಂಬ್ಯುಲೆನ್ಸ್‌ ನಲ್ಲೇ ಮಗುವಿಗೆ ಜನ್ಮ ನೀಡಿದ ಕೋವಿಡ್ ಸೋಂಕಿತ ಮಹಿಳೆ!

- Advertisement -
- Advertisement -

ಮೈಸೂರು: ಕೋವಿಡ್-‌19 ಸೋಂಕಿತ ಮಹಿಳೆಯೊಬ್ಬರು ಆಸ್ಪತ್ರೆಗೆ ಹೋಗುವಾಗ ಆಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಟಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದ ಸವಿತಾ (26) ಎಂಬುವವರು ಮಗುವಿಗೆ ಜನ್ಮ ನೀಡಿದವರು.

ಕೋವಿಡ್‌ ದೃಢಪಟ್ಟಿದ್ದರಿಂದಾಗಿ ಮಹಿಳೆಯನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲು ಸಿಬ್ಬಂದಿ ಹಿಂದೇಟು ಹಾಕಿದ್ದು, ಅಧಿಕಾರಿಗಳು ಸೂಚಿಸಿದ ನಂತರ ಮೈಸೂರಿಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಜಿಲ್ಲೆಯ ಚಿಕ್ಕಳ್ಳಿ ಗ್ರಾಮದ ಬಳಿ ಹೆರಿಗೆಯಾಗಿದ್ದು, ಸದ್ಯ ಮಹಿಳೆ ಮತ್ತು ಮಗು ವಿ.ವಿ. ಪುರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

driving
- Advertisement -

Related news

error: Content is protected !!