Wednesday, September 2, 2026
spot_imgspot_img
spot_imgspot_img

ಒಂದೇ ಮುಹೂರ್ತದಲ್ಲಿ ಅಕ್ಕ ತಂಗಿಯನ್ನು ವರಿಸಿದ್ದ ಮಧುಮಗ ಅರೆಸ್ಟ್!

- Advertisement -
- Advertisement -

ಕೋಲಾರ: ಒಂದೇ ಮುಹೂರ್ತದಲ್ಲಿ ಅಕ್ಕ ತಂಗಿಯನ್ನು ಮದುವೆಯಾಗೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿದ್ದ ಉಮಾಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದ ಸುಪ್ರಿಯಾ ಹಾಗೂ ಲಲಿತ ಎಂಬ ಅಕ್ಕ ತಂಗಿಯರನ್ನು ಉಮಾಪತಿ ಎಂಬಾತ ಮದುವೆಯಾಗಿದ್ದ. ಮದುವೆಯ ಪೋಟೋ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆ ಗಳು ನಡೆದಿತ್ತು.

ಮಾತು ಬಾರದ ಅಕ್ಕನನ್ನು ಮದುವೆಯಾದ್ರೆ ಮಾತ್ರವೇ ತಾನು ಮದುವೆಯಾಗೋದಾಗಿ ತಂಗಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಉಮಾಪತಿ ಒಂದೇ ಮುಹೂರ್ತದಲ್ಲಿ ಇಬ್ಬರನ್ನೂ ಮದುವೆಯಾಗಿದ್ದ. ಮದುವೆಯ ಬೆನ್ನಲ್ಲೆ ಇಬ್ಬರು ಹೆಂಡಿರ ಪೋಟೋ ಸಖತ್‌ ವೈರಲ್ ಆಗಿತ್ತು.

ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಅವರು ತನಿಖೆಗೆ ಆದೇಶಿಸಿದ್ದರು. ತನಿಖೆಯ ವೇಳೆ ಯಲ್ಲಿ ತಂಗಿ ಲಲಿತಾ ಅಪ್ರಾಪ್ತೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ಕಾಯ್ದೆಯಡಿ ಯಲ್ಲಿ ಉಮಾಪತಿ ಸೇರಿ 7 ಮಂದಿಯ ವಿರುದ್ದ ಪ್ರಕರಣ‌ ದಾಖಲಾಗಿದ್ದು, ಉಮಾಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

- Advertisement -

Related news

error: Content is protected !!