Saturday, June 27, 2026
spot_imgspot_img
spot_imgspot_img

ಚಲಿಸುತ್ತಿದ್ದ ಬೈಕ್ ಮೇಲೆ ಮರ ಉರುಳಿ ಗಂಭೀರ ಗಾಯಗೊಂಡ ಸವಾರ!

- Advertisement -
- Advertisement -

ಶಿವಮೊಗ್ಗ: ಹೊಸನಗರದ ಕೊಡಚಾದ್ರಿ ಕಾಲೇಜು ಎದುರು ಚಲಿಸುತ್ತಿದ್ದ ಬೈಕ್ ಗಳ‌ ಮೇಲೆ ಮರ ಉರುಳಿ ಬಿದ್ದು, ಓರ್ವ ಸವಾರ ಗಂಭೀರ ಗಾಯಗೊಂಡು, ಮತ್ತೋರ್ವನಿಗೆ ಸಣ್ಣ-ಪುಟ್ಟ ಗಾಯಗಳಾಗಿರುವ ಘಟನೆ ಸೋಮವಾರ ನಡೆದಿದೆ.

ಭಾರಿ ಗಾಳಿ-ಮಳೆಯಿಂದಾಗಿ ರಸ್ತೆ ಪಕ್ಕದಲ್ಲಿದ್ದ ಬೃಹತ್ ಮರ ರಸ್ತೆಯಲ್ಲಿ ಉರುಳಿ ಬಿದ್ದ ಪರಿಣಾಮ ಮಾವಿನಕೊಪ್ಪ ಬಡಾವಣೆಯ ಸಾಧಿಕ್ ಎಂಬುವರಿಗೆ ಗಂಭೀರ ಗಾಯವಾಗಿದೆ. ಈತ ಬೈಕ್ ನಲ್ಲಿ ತೆರಳುವಾಗ ಮರ ಬಿದ್ದಿದೆ. ಚಿಕಿತ್ಸೆಗಾಗಿ ಈತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೋರ್ವ ಬೈಕ್ ಸವಾರ ಪ್ರತೀಕ್ ಹಾಗೂ ನಡೆದುಕೊಂಡು ಹೋಗುತ್ತಿದ್ದ ಋತ್ವಿಕ್ ಎಂಬುವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ರಸ್ತೆಗೆ ಅಡ್ಡಲಾಗಿ‌ ಮರ ಬಿದ್ದಿದ್ದರಿಂದ ಹೊಸನಗರ ಹಾಗೂ ಶಿವಮೊಗ್ಗ ನಡುವಿನ ಸಂಪರ್ಕ‌ ಕೆಲಕಾಲ ಸ್ಥಗಿತಗೊಂಡಿತ್ತು. ಬಳಿಕ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

- Advertisement -

Related news

error: Content is protected !!