Wednesday, October 7, 2026
spot_imgspot_img
spot_imgspot_img

ಮಂಗಳೂರು: ಆಸ್ಪತ್ರೆ ಸಿಬ್ಬಂದಿಯ ಯಡವಟ್ಟು; ಶವ ಅದಲು ಬದಲು!

- Advertisement -
- Advertisement -

ಮಂಗಳೂರು: ಆಸ್ಪತ್ರೆ ಸಿಬ್ಬಂದಿಯ ಯಡವಟ್ಟಿನಿಂದ ಶವ ಅದಲು ಬದಲಾಗಿರುವ ಘಟನೆ ಮಂಗಳೂರಿನ ಮುಕ್ಕದ ಶ್ರೀನಿವಾಸ ಆಸ್ಪತ್ರೆಯ ಶವಗಾರದಲ್ಲಿ ನಡೆದಿದೆ.

ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಸುರತ್ಕಲ್ ರೀಜನ್ ಪಾರ್ಕ್ ನಿವಾಸಿ ಜಗದೀಶ್ ಕುಂದರ್ ಮತ್ತು ಕಾರ್ಕಳ ನಿವಾಸಿ ಸುಧಾಕರ್ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು‌.

ಜಗದೀಶ್ ಕುಟುಂಬಿಕರು ಶವವನ್ನು ಮನೆಗೆ ಕೊಂಡೊಯ್ದ ವೇಳೆ ಮೃತದೇಹ ಅದಲು ಬದಲಾಗಿದೆ. ಸದ್ಯ ಎರಡು ಕಡೆಯ ಕುಟುಂಬದವರು ಮೃತದೇಹವನ್ನು ಆಸ್ಪತ್ರೆಗೆ ತಂದು ಬದಲಾಯಿಸಿಕೊಂಡಿದ್ದಾರೆ.

ಆಸ್ಪತ್ರೆ ಶವಾಗಾರದಲ್ಲಿದ್ದ ಸಿಬ್ಬಂದಿ ಸರಿಯಾಗಿ ಹೆಸರು ನೋಡದೇ ಮೃತದೇಹ ನೀಡಿರುವುದು ಈ ಅವಾಂತರಕ್ಕೆ ಕಾರಣವಾಗಿದೆ.

- Advertisement -

Related news

error: Content is protected !!