Sunday, September 13, 2026
spot_imgspot_img
spot_imgspot_img

ಉಡುಪಿ: ನವಜಾತ ಶಿಶು ಕೊರೊನ ಸೋಂಕಿಗೆ ಬಲಿ; ಬೈರಂಪಳ್ಳಿ ಶ್ರಮಿಕ ತರುಣರ ತಂಡದಿಂದ ಅಂತ್ಯಕ್ರಿಯೆ

- Advertisement -
- Advertisement -

ಉಡುಪಿ: ಇಂದು ಬೈರಂಪಳ್ಳಿ ಬಳಿ ಗರ್ಭಿಣಿ ಮಹಿಳೆಗೆ ಕೊರೊನ ಸೋಂಕಿನ ಪರಿಣಾಮ ಎಂಟು ತಿಂಗಳಲ್ಲಿ ಪ್ರಸವಗೊಂಡು ನವಜಾತ ಶಿಶು ಮಾಹಾಮಾರಿಗೆ ಬಲಿಯಾಗಿದೆ.

ಈ ಕೊರೋನ ಮಹಾಮಾರಿ ಸಂಬಂಧವನ್ನು ಅಲ್ಲಗಳೆಯುತ್ತಿದ್ದು, ಜನರು ಮಗುವಿನ ಅಂತ್ಯಕ್ರಿಯೆಗೆ ನಿರಾಕರಿಸಿದಾಗ ಜನಿಸಿದ ಮಗು ಕೆಲವೇ ಸಮಯದಲ್ಲಿ ಅನಾಥವಾಯಿತು.

ಆ ಸಂದರ್ಭದಲ್ಲಿ ಬೈರಂಪಳ್ಳಿಯ ಶ್ರಮಿಕ ತರುಣರ ತಂಡದ ಯುವಕರು ಮಗುವಿನ ಅಂತ್ಯಸಂಸ್ಕಾರ ನಡೆಸಿದ್ದಾರೆ. ಶ್ರಮಿಕ ತಂಡಕ್ಕೆ ಮನವಿ ಮಾಡಿದಾಗ ಕೂಡಲೇ ಅಧ್ಯಕ್ಷರಾದ ಪ್ರಕಾಶ್ ಕುಲಾಲ್ ನೇತೃತ್ವದ ತಂಡವು ಕಾರ್ಯಪ್ರವರ್ತರಾಗಿ ವಿದಿವತ್ತಾಗಿ ಅಂತ್ಯಸಂಸ್ಕಾರ ನಡೆಸಿ ಸಮಾಧಿ ಮಾಡಿದರು.

ಈ ಕಾರ್ಯದಲ್ಲಿ ತಂಡದ ಗೌರವಾಧ್ಯಕ್ಷರಾದ ಸಂತೋಷ್ ಕುಮಾರ್ ಬೈರಂಪಳ್ಳಿ ಮತ್ತು ಶೋಧನ್ ಸುವರ್ಣ ಭಾಗವಹಿಸಿದ್ದರು.

- Advertisement -

Related news

error: Content is protected !!