Sunday, June 29, 2025
spot_imgspot_img
spot_imgspot_img

ಬಂಟ್ವಾಳ: ಮಾಲಕನ ನಿರ್ಲಕ್ಷ್ಯದಿಂದ ಕೆಲಸಗಾರನೋರ್ವ ಸಾವು; ದೂರು ದಾಖಲು!

- Advertisement -
- Advertisement -

ಬಂಟ್ವಾಳ: ಮಾಲಕನ ನಿರ್ಲಕ್ಷ್ಯದಿಂದ ಕೆಲಸಗಾರನೋರ್ವ ಮೃತಪಟ್ಟ ಘಟನೆ ನಡೆದಿದೆ. ಕಾರ್ಮಿಕನ ಸಾವಿಗೆ ಮಾಲಕನೇ ಕಾರಣವಾಗಿದ್ದಾನೆಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ಲೈ ವುಡ್ ಫ್ಯಾಕ್ಟರಿಗೆ ಸಿಮೆಂಟ್ ಶೀಟ್ ಹಾಕುವ ವೇಳೆ ಓರ್ವ ಕಾರ್ಮಿಕ ಶೀಟ್ ತುಂಡಾಗಿ ಬಿದ್ದಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೊಬ್ಬ ಕಾರ್ಮಿಕನಿಗೆ ಕೈಗೆ ಗಾಯಗೊಂಡಿದ್ದು, ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಅಬೂಬಕ್ಕರ್ ಸಿದ್ದಿಕ್‌(68) ಎಂದು ಗುರುತಿಸಲಾಗಿದೆ. ಗಾಯಾಳು ನಂದಾವರ ನಿವಾಸಿ ಇಬ್ರಾಹಿಂ ಖಲೀಲ್ (24) ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Related news

error: Content is protected !!