Thursday, June 18, 2026
spot_imgspot_img
spot_imgspot_img

ಮಂಗಳೂರು:ಲಾಕ್‌ ಡೌನ್ ನಿಯಮ ಉಲ್ಲಂಘಿಸಿದ 93 ವಾಹನಗಳು ಪೊಲೀಸ್ ವಶ!

- Advertisement -
- Advertisement -

ಮಂಗಳೂರು: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸಂಚರಿಸಿದ 88 ದ್ವಿಚಕ್ರ, 5 ನಾಲ್ಕು ಚಕ್ರಗಳ ವಾಹನಗಳ ಸಹಿತ 93 ವಾಹನಗಳನ್ನು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶುಕ್ರವಾರ ವಶಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಸ್ಕ್ ಧರಿಸದ 428 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ 65,300 ರೂ. ದಂಡ ವಿಧಿಸಲಾಗಿದೆ. ನಿಯಮ ಉಲ್ಲಂಘಿಸಿದ ಅಂಗಡಿ, ರೆಸ್ಟೋರೆಂಟ್‌ಗಳ ವಿರುದ್ಧ ಮತ್ತು ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ತಲಾ 1 ಪ್ರಕರಣ ದಾಖಲಿಸಲಾಗಿದ್ದು, ಅಲ್ಲದೆ ಮೋಟಾರು ಕಾಯ್ದೆ ಉಲ್ಲಂಘಿಸಿದ 97 ಪ್ರಕರಣ ದಾಖಲಿಸಿ 51,300 ರೂ.ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!