Sunday, October 11, 2026
spot_imgspot_img
spot_imgspot_img

ಸುಳ್ಯ: ಅಶಕ್ತ ಬಡ ಕುಟುಂಬಗಳಿಗೆ ನೆರವಾದ ಯುವ ಉದ್ಯಮಿಗಳು!

- Advertisement -
- Advertisement -

ಸುಳ್ಯ: ಅಶಕ್ತ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಸುಳ್ಯದ ಯುವ ಉದ್ಯಮಿಗಳಾದ ಪ್ರಗ್ಯಾನ್ ಎಂಟರ್ ಪ್ರೈಸರ್ಸ್ ನ ಮಾಲಕ ಕಾರ್ತಿಕ್ ರೈ ಕನ್ನೆಜಾಲು, ಡಿಸೈನ್ ಇಂಟೀರಿಯರ್ಸ್ ಅಶ್ವಿನಿ ಅಡ್ಕಾರ್, ಆದಿಲಕ್ಷ್ಮಿ ಟ್ರಾನ್ಸ್ ಪೋರ್ಟ್ ನ ರಾಜೇಶ್ ಕಿರಿಭಾಗ, ವಿನಾಯಕ ಸೂಪರ್ ಮಾರ್ಕೆಟ್ ನ ಅಮೃತ್ ರಾಜ್ ಸುಳ್ಯ ಅವರ ನೇತೃತ್ವದಲ್ಲಿ ಸಹಾಯಧನ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು.

ಸುಮಾರು 1500 ರೂ. ಮೌಲ್ಯದ 12 ಮನೆಗೆ ಕಿಟ್ ಹಾಗೂ ರೂ 10 ಸಾವಿರದಷ್ಟು ಸಹಾಯಧನ ನೀಡಿ ಮಾನವೀಯತೆ ಮೆರೆದಿದ್ದಾರೆ.ಅಲ್ಲದೇ ನಾಗಪಟ್ಟಣದಲ್ಲಿರುವ ವಿಕಲಚೇತನ ಮನೆಗೆ, ಕಲ್ಲುಮುಟ್ಲುವಿನ ಉಮೇಶ್ ಎಂಬವರ ಮಗನ ಚಿಕಿತ್ಸೆಗೆ, ರಾಜೇಶ್ವರಿ ಕಲ್ಲುಮುಟ್ಲುರವರಿಗೆ, ಜಯನಗರ, ಕಾಂತಮಂಗಲ, ಸುಳ್ಯ ನಗರ ಪ್ರದೇಶಗಳಲ್ಲಿ ಅಶಕ್ತರನ್ನು ಗುರುತಿಸಿ ವಿತರಿಸಿದರು. ಈ ಸಂದರ್ಭದಲ್ಲಿ ಪ್ರದೀಪ ಆಡ್ತಾರೆ ವಿನಯ್ ನಾರಾಲು ಮಂಜುನಾಥ ಬಳ್ಳಾರಿ ಆನಂದ ನವೀನ್ ಮಚಾದೊರವರು ಸಹಕರಿಸಿದ್ದು, ಯುವಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!