Monday, June 22, 2026
spot_imgspot_img
spot_imgspot_img

ವಿಟ್ಲ ಪೇಟೆಗೆ ಆಗಮಿಸಿದ 200ಕ್ಕೂ ಅಧಿಕ ಮಂದಿಯ ಸ್ವ್ಯಾಬ್ ಟೆಸ್ಟ್; ಶೂನ್ಯ ಪಾಸಿಟಿವ್ ಪ್ರಕರಣ ದಾಖಲು

- Advertisement -
- Advertisement -

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಕೊರೋನ ಟಾಸ್ಕ್ ಪೋರ್ಸ್ ಸಭೆಯಲ್ಲಿ ಕೊರೋನ ನಿಯಂತ್ರಿಸಲು ವಿಟ್ಲ ಪೇಟೆಗೆ ಆಗಮಿಸಿದ ಜನರನ್ನು ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದ್ದು, ಒಟ್ಟು 200ಕ್ಕೂ ಅಧಿಕ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಟ್ಲ ಪೇಟೆಗೆ ಬರುವ ಪ್ರವೇಶ ಸ್ಥಳವಾದ ಬೊಬ್ಬೆಕೇರಿ, ನಾಡಕಚೇರಿ, ಮೇಗಿನಪೇಟೆ, ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು, ಪಟ್ಟಣ ಪಂಚಾಯತ್ ಸಿಬ್ಬಂದಿಗಳು, ವಿಟ್ಲ ಪೊಲೀಸರು ಜಂಟಿಯಾಗಿ ನಾಕಾಬಂಧಿ ಅಳವಡಿಸಲಾಗಿತ್ತು.

ಒಟ್ಟು 200ಕ್ಕೂ ಅಧಿಕ ಮಂದಿಯ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದ್ದು, ಯಾವುದೇ ಪಾಸಿಟಿವ್ ಪ್ರಕರಣ ಲಭ್ಯವಾಗಿಲ್ಲ ಎಂದು ವಿಟ್ಲ ಆರೋಗ್ಯ ಕೇಂದ್ರದಿ0ದ ಮಾಹಿತಿ ದೊರಕಿದೆ.

- Advertisement -

Related news

error: Content is protected !!