Saturday, June 27, 2026
spot_imgspot_img
spot_imgspot_img

ಮಂಗಳೂರು: ಬ್ಯಾಂಕ್‌ ನಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ ವ್ಯಕ್ತಿಯೋರ್ವರಿಗೆ 1 ಲಕ್ಷ ರೂ ವಂಚನೆ!!

- Advertisement -
- Advertisement -

ಮಂಗಳೂರು: ಅಪರಿಚಿತನೋರ್ವ ರಾಷ್ಟ್ರೀಕೃತ ಬ್ಯಾಂಕ್‌ವೊಂದರಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಹಿರಿಯ ನಾಗರಿಕರೊಬ್ಬರ ಖಾತೆಯಿಂದ 1 ಲಕ್ಷ ರೂ. ದೋಚಿದ ಘಟನೆ ನಡೆದಿದೆ.

ಅಪರಿಚಿತ ವ್ಯಕ್ತಿಯೊಬ್ಬ 73 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ಕರೆ ಮಾಡಿ ‘ನಿಮ್ಮ ಎಟಿಎಂ ಅವಧಿ ಮುಗಿದಿದೆ, ಅದನ್ನು ನವೀಕರಿಸಲು ಅದರ ನಂಬರ್ ಮತ್ತಿತರ ಮಾಹಿತಿ ನೀಡಬೇಕು’ ಎಂದು ಸೂಚಿಸಿದ್ದು, ನಂತರ ಅವರ ಮೊಬೈಲ್‌ಗೆ ಒಟಿಪಿ ಕಳುಹಿಸಿ ಆ ಒಟಿಪಿ ಪಡೆದುಕೊಂಡು ಬಳಿಕ ಖಾತೆದಾರರ ಖಾತೆಯಿಂದ 1 ಲಕ್ಷ ರೂ.ನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.

- Advertisement -

Related news

error: Content is protected !!