- Advertisement -
- Advertisement -
ಪುತ್ತೂರು: ಅನಾರೋಗ್ಯದಿಂದಾಗಿ ಎರಡು ತಿಂಗಳ ಬಾಣಂತಿ ಸಾವನ್ನಪ್ಪಿದ ಘಟನೆ ಪುತ್ತೂರಿನ ಕೃಷ್ಣನಗರದಲ್ಲಿ ಜೂ. 27 ರಂದು ನಡೆದಿದೆ.

ಮೃತರನ್ನು ಕೃಷ್ಣನಗರ ನಿವಾಸಿ ದಿಲೀಪ್ ರವರ ಪತ್ನಿ ಅಕ್ಷತಾ(26) ಎಂದು ಗುರುತಿಸಲಾಗಿದೆ.

ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

ಅಕ್ಷತಾ ಅವರು ಪುತ್ತೂರು ನ್ಯಾಯಾಲಯದಲ್ಲಿ ತಾಲೂಕು ಕಾನೂನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಂಬಂಧಿಸಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತರು ಪತಿ ಮತ್ತು ಎರಡು ತಿಂಗಳ ಮಗುವನ್ನು ಅಗಲಿದ್ದಾರೆ.


- Advertisement -








