ಮಧ್ಯಪ್ರದೇಶ: ಪಾಪಿ ಗಂಡನೋರ್ವ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡಿದಲ್ಲದೇ ಬಳಿಕ ಆಕೆಗೆ ಆ್ಯಸಿಡ್ ಕುಡಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನ ಡಾಬಾ ಎಂಬಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ಆರೋಪಿ ವಿರೇಂದ್ರ ಕುಮಾರ್ ಜಾತ್ಯಾ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ಕಲಹದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮಹಿಳೆ ಕುಟುಂಬಸ್ಥರು ಮದುವೆ ಸಂದರ್ಭದಲ್ಲಿ 10 ಲಕ್ಷ ರೂ. ಗಂಡನ ಮನೆಯವರಿಗೆ ನೀಡಿದ್ದಾರೆಂದು ಮಹಿಳೆ ಹೇಳಿಕೊಂಡಿದ್ದಾಳೆ.ಇದೀಗ ಮತ್ತೆ ತವರು ಮನೆಯಿಂದ 3 ಲಕ್ಷ ರೂ. ಹಣ ತರಲು ಆರೋಪಿ ವಿರೇಂದ್ರ ಕುಮಾರ್ ಜಾತ್ಯಾ ಪತ್ನಿ ಶಶಿಗೆ ಕಿರುಕುಳ ನೀಡಿದ್ದಾನೆ ಈ ವಿಷಯವಾಗಿ ಮಹಿಳೆ ಪೋಷಕರೊಂದಿಗೆ ಮಾತನಾಡಲು ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಷ್ಟೇ ಅಲ್ಲದೇ, ಆ್ಯಸಿಡ್ ಕುಡಿಸಿ ಕ್ರೌರ್ಯ ಮೆರೆದಿದ್ದಾನೆ.

ಇದರಿಂದಾಗಿ ತೀವ್ರವಾಗಿ ಅಸ್ವಸ್ಥರಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಹದೊಳಗಿನ ಕೆಲವೊಂದು ಅಂಗಗಳು ಆ್ಯಸಿಡ್ನಿಂದಾಗಿ ಹಾನಿಗೊಳಗಾಗಿದ್ದು, ಮಹಿಳೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.










