Tuesday, September 8, 2026
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸಿಸ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿದ 6 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್

- Advertisement -
- Advertisement -

ವಿಟ್ಲ: ಕೊರೋನ ಸಂಕಷ್ಟದ ಜೊತೆಗೆ 2020-21ರ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಆನ್ಲೈನ್ ಸೌಲಭ್ಯ ಹಾಗೂ ಮಿತ ಭೌತಿಕ ತರಗತಿಗಳೊಂದಿಗೆ ವರ್ಷ ಪೂರ್ತಿಯ ಪಠ್ಯಕ್ರಮ ನಡೆಸಿ ಸರಕಾರದ ಆದೇಶದಂತೆ ಪರೀಕ್ಷಾ ಸಿದ್ಧತೆಗಳನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳು ಮಾಡಿಕೊಂಡಿದ್ದವು. ಕೊರೋನ ಎರಡನೆಯ ಅಲೆಯು ತೀವ್ರಗೊಂಡ ಹಿನ್ನೆಲೆಯಲ್ಲಿ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯನ್ನು ನಡೆಸಲಾಗದೆ ವಿದ್ಯಾರ್ಥಿಗಳ 10ನೇ ತರಗತಿ ಅಂಕ ಹಾಗೂ ಪ್ರಥಮ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳ ಅಂಕಗಳನ್ನು ಆಧರಿಸಿ ಫಲಿತಾಂಶವನ್ನು ನೀಡಲಾಗಿದೆ.

ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2018-19 ಸಾಲಿನಲ್ಲಿ SSLC ಪೂರೈಸಿರುವ ಚಿನ್ಮಯಿ, ಅಪರ್ಣ ಬಾಳಿಗ, ಚೈತನ್ಯ, ಪುಷ್ಪರಾಜ್ ಶೆಟ್ಟಿ, ಗೋವಿಂದ ಪ್ರಸಾದ, ಕಾರ್ತಿಕ್ ಶೆಟ್ಟಿ ಈ ವಿದ್ಯಾರ್ಥಿಗಳು ಬೇರೆ ಬೇರೆ ವಿದ್ಯಾಸಂಸ್ಥೆಗಳಲ್ಲಿ PUC ಯಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ, ಹಾಗೂ ಉನ್ನತ ಶ್ರೇಣಿಯನ್ನು ಹೊಂದಿ ತೇರ್ಗಡೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಆ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕವೃಂದ, ಸಿಬ್ಬಂದಿವರ್ಗವು ಪ್ರಶಂಸಿದೆ.

- Advertisement -

Related news

error: Content is protected !!