- Advertisement -
- Advertisement -

ವಿಟ್ಲ; ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯ ಎಂಟು ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ಸೇವೆಗಳು ಲಭ್ಯವಿದೆ.
ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ಗಡಿನಾಡ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲೂ ಹಲವಾರು ನಿರ್ಬಂಧವನ್ನು ಹೇರಲಾಗಿದೆ. ಮಧ್ಯಾಹ್ನದ ವರೆಗೆ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇದ್ದವು. ಇನ್ನುಳಿದಂತೆ ಬೇರೆಲ್ಲಾ ಸೇವೆಗಳು ಲಭ್ಯವಿರಲಿಲ್ಲ. ಖಾಸಗಿ ಬಸ್ ಸಂಚಾರವೂ ಇರಲಿಲ್ಲ.

ಗ್ರಾಹಕರ ಸಂಖ್ಯೆ ವಿರಳವಾಗಿದೆ. ಅಗತ್ಯ ವಸ್ತುಗಳ ಸಾಗಾಟದ ವಾಹನಗಳು, ದ್ವಿಚಕ್ರ ವಾಹನಗಳು ಮತ್ತು ಆಟೊ ರಿಕ್ಷಾಗಳು ಓಡಾಡುತ್ತಿವೆ. ಬೆಳಗ್ಗೆ ಹೊತ್ತು ಬೆರಳೆಣಿಕೆಯಷ್ಟು ಖಾಸಗಿ, ಸಿಟಿ ಬಸ್ ಗಳು ರಸ್ತೆಗಿಳಿದಿದ್ದರೂ ಪ್ರಯಾಣಿಕರಿಲ್ಲದ ಕಾರಣ ಅವುಗಳೂ ಸಂಚಾರವನ್ನು ಸ್ಥಗಿತಗೊಳಿಸುತ್ತಿವೆ ಎಂದು ತಿಳಿದುಬಂದಿದೆ.


- Advertisement -