Sunday, June 28, 2026
spot_imgspot_img
spot_imgspot_img

ಪುತ್ತೂರು: ದರ್ಬೆಯಲ್ಲಿ ಇನ್ನೋವಾ ಕಾರು ಚಾಲಕನ ಮೇಲೆ ತಂಡದಿಂದ ಹಲ್ಲೆ; ಕೇವಲ 30 ನಿಮಿಷದಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ ಪುತ್ತೂರು ಪೊಲೀಸರು

- Advertisement -
- Advertisement -

ಪುತ್ತೂರು: ದರ್ಬೆಯ ಪೆಟ್ರೋಲ್ ಬಂಕ್ ಒಂದರಲ್ಲಿ ಇನ್ನೋವಾ ಕಾರು ಚಾಲಕ ಹಾಗೂ ತಂಡದ ನಡುವೆ ಗಲಾಟೆ ನಡೆದ ಘಟನೆ ಆ.24 ರಂದು ರಾತ್ರಿ ನಡೆದಿದೆ.

ಘಟನೆಯಲ್ಲಿ ಇನ್ನೋವಾ ಚಾಲಕ ಕೆಮ್ಮಾಯಿ ನಿವಾಸಿ ರಾಧಾಕೃಷ್ಣ (ಆರ್. ಕೆ) ಗಾಯ ಗೊಂಡಿದ್ದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಇನ್ನೋವಾ ಕಾರಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ಅರಿತ ಕೂಡಲೇ ಸ್ಥಳಕ್ಕೆ ಪೋಲಿಸರು ಧಾವಿಸಿದ ವೇಳೆ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳನ್ನು ಬೆನ್ನಟ್ಟಿದ ಪೊಲೀಸರು ಕೇವಲ 30 ನಿಮಿಷಗಳಲ್ಲಿ ಆರು ಮಂದಿಯನ್ನು ಬನ್ನೂರು ಸಮೀಪ ಪುತ್ತೂರು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.

- Advertisement -

Related news

error: Content is protected !!